ಮಡಿಕೇರಿ ಮಾ.20 : ಅರೆ ಸೇನಾಪಡೆ ನಿವೃತ್ತ (ಮಾಜಿ) ಯೋಧರ ಸಮಾವೇಶವು ಮಾರ್ಚ್, 23 ರಂದು ಬೆಳಗ್ಗೆ 10.30 ಗಂಟೆಗೆ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ನಡೆಯಲಿದೆ. ಮಾಜಿ ಯೋಧರು ಅನುಭವಿಸುತ್ತಿರುವ ಸಮಸ್ಯೆಗಳು ಕುಂದುಕೊರತೆಗಳ ಬಗ್ಗೆ ಸಭೆ ನಡೆಯಲಿದೆ.
ಅಡ್ವೋಕೇಟ್ ಜನರಲ್ ಮತ್ತು ಸಮಾಜ ಸೇವಕರಾದ ಎಸ್.ಎಸ್.ಪೊನ್ನಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ ಅವರು ಸಮಸ್ಯೆಗಳ ಬಗ್ಗೆ ಸಮಾಲೋಚಿಸಿ ವಿಚಾರ ವ್ಯಕ್ತಪಡಿಸಲಿದ್ದಾರೆ. ಫೀಲ್ಡ್ ಮಾರ್ಷಲ್ ಕೊಡವ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗುರುಮನೆ-12 ಹಾಲಿ ಅಧ್ಯಕ್ಷರು, ಉದ್ಯಮಿ ಹಾಗೂ ಸಮಾಜ ಸೇವಕರಾದ ದೇಯಂಡ ಜಯಾಚಂಗಪ್ಪ ಇತರರು ಪಾಲ್ಗೊಳ್ಳಲಿದ್ದಾರೆ.
ಅರೆಸೇನಾಪಡೆ ಮಾಜಿ ಯೋಧರು ಕರ್ತವ್ಯ ನಿರತ ಯೋಧರ ಕುಟುಂಬದವರು, ಅವಲಂಬಿತರು ಸಮಾವೇಶಕ್ಕೆ ಆಗಮಿಸುವಂತೆ ಅರೆ ಸೇನಾಪಡೆ ನಿವೃತ್ತ(ಮಾಜಿ) ಯೋಧರ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪರವಾಗಿ ಕಾರ್ಯದರ್ಶಿ ಹಾಗೂ ಸಂಚಾಲಕರಾದ ನೂರೇರ ಎಂ.ಭೀಮಯ್ಯ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕಾರ್ಯದರ್ಶಿ ಮೊ. 9481057868 ನ್ನು ಸಂಪರ್ಕಿಸಬಹುದು.















