ಮಡಿಕೇರಿ ಮಾ.20 : ಕರ್ನಾಟಕ ಅರಣ್ಯ ಇಲಾಖೆಯ ಕೊಡಗು ವೃತ್ತದಲ್ಲಿ ಒಟ್ಟು 5 ಆನೆ ಕಾವಾಡಿಗ ಹುದ್ದೆಯ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು 2023 ರ ಮಾರ್ಚ್, 30 ರಿಂದ ಏಪ್ರಿಲ್, 29 ರ ಸಂಜೆ 5.30 ಗಂಟೆಗೆ ಕೊನೆಯ ದಿನವಾಗಿದೆ. ಪೂರ್ಣ ಮಾಹಿತಿ ಇಲಾಖಾ ವೆಬ್‍ಸೈಟ್ www.kfdrecruitment.in ನಲ್ಲಿ ಹಾಗೂ ಕಚೇರಿಯಲ್ಲಿ ಲಭ್ಯವಿರುತ್ತದೆ ಎಂದು ಆನೆ ಕಾವಾಡಿಗ ಹುದ್ದೆಯ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರಿ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.















