ಮಡಿಕೇರಿ ಮಾ.20 : ಗಿರಿಜನ ಬಾಹುಳ್ಯವಿರುವ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಪೇಟೆಯಲ್ಲಿ ಕಾಂಗ್ರೆಸ್ ಎಸ್‍ಟಿ ಘಟಕದ ವತಿಯಿಂದ ‘ಬುಡಕಟ್ಟು ಸಮುದಾಯಗಳ ಸಮಾವೇಶ’ ಬೃಹತ್ ಮೆರವಣಿಗೆಯೊಂದಿಗೆ ನಡೆಯಿತು.
ಸಮಾವೇಶದಲ್ಲಿ ಪಾಲ್ಗೊಂಡ ಶ್ರೀ ಬೋಧಾನಂದ ಸ್ವಾಮೀಜಿ, ಕಳೆದ ಎರಡು ದಶಕಗಳಿಂದ ಜಿಲ್ಲೆಯಲ್ಲಿ ಒಂದೇ ಪಕ್ಷದ ಶಾಸಕರು ಅಧಿಕಾರದಲ್ಲಿದ್ದರೂ, ಗಿರಿಜನ ಸಮೂಹಕ್ಕೆ ಇಂದಿಗೂ ನೆಮ್ಮದಿಯ ಬದುಕಿಗೆ ಸೂಕ್ತ ಸೂರು, ಕುಡಿಯುವ ನೀರು, ಮೂಲ ಸೌಲಭ್ಯ ದೊರಕಿಲ್ಲ. ಬುಡಕಟ್ಟು ಸಮುದಾಯಕ್ಕೆ ವಿನಿಯೋಗವಾಗಬೇಕಾದ ಸರ್ಕಾರದ ಅನುದಾನ ಕೊಡಗಿನಲ್ಲಿ ಸಮರ್ಪಕವಾಗಿ ಬಳಕೆಯಾಗಿಲ್ಲವೆಂದು ಬೇಸರ
ವ್ಯಕ್ತಪಡಿಸಿದರು.
ಆದಿವಾಸಿ ಸಮೂಹವನ್ನು ಸದಾ ಕತ್ತಲಲ್ಲಿಯೇ ಇರಿಸಲಾಗಿದೆ, ಶೋಷಿತ ಸಮೂಹವನ್ನು ನಿರ್ಲಕ್ಷಿಸಿದ ರಾಜಕಾರಣಿಗಳು ಮಾತ್ರ ಬೆಳೆದಿದ್ದಾರೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ, ಕಳೆದ 20 ವರ್ಷಗಳಿಂದ ಆದಿವಾಸಿಗಳ ಜೀವನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಟೀಕಿಸಿದರು.
ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಮಾತನಾಡಿ, ಕಾಂಗ್ರೆಸ್‍ನಿಂದ ವಿತರಿಸಲಾಗುತ್ತಿರುವ ‘ಗ್ಯಾರಂಟಿ ಕಾರ್ಡ್’ ಬೋಗಸ್ ಕಾರ್ಡ್’ ಅಲ್ಲ, ಇದು ಬದಲಾವಣೆಯ ಕಾರ್ಡ್. ಪ್ರತಿಯೊಬ್ಬರ ಜೀವನ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬದಲಾವಣೆಯನ್ನು ಕಾಣಲಿದ್ದು, ಈಗಿನ ಬಿಜೆಪಿ ಭ್ರಷ್ಟಾಚಾರವನ್ನು ಚುನಾವಣೆಯಲ್ಲಿ ಕೊನೆಗಾಣಿಸುವಂತೆ ಕರೆ ನೀಡಿದರು.
ಕಾಂಗ್ರೆಸ್‍ನಿಂದ ಮಾತ್ರ ಆದಿವಾಸಿಗಳ ಸಮಸ್ಯೆ ಪರಿಹಾರ ಸಾಧ್ಯವೆಂದ ಅವರು, ಕೊಡಗಿನಲ್ಲಿ ಕಾಂಗ್ರೆಸ್‍ಗೆ ಅಗತ್ಯ ಅಧಿಕಾರ ಇಲ್ಲ. ಹೀಗಾಗಿ ಕೊಡಗಿನ ಜನರಿಗೆ ಅನೇಕ ಸಮಸ್ಯೆಗಳಿಂದ ಪರಿಹಾರ ಸಿಕ್ಕಿಲ್ಲ. ಅಧಿಕಾರ ಇಲ್ಲದಿದ್ದರೂ ವೈಯಕ್ತಿಕ ನೆಲೆಯಲ್ಲಿ ಹಲವರ ಸಮಸ್ಯೆಗಳಿಗೆ ಪರಿಹಾರ ನೀಡಿರುವುದಾಗಿ ಹೇಳಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಈ ಬಾರಿ ಕ್ಷೇತ್ರದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಕಾಂಗ್ರೆಸ್ ಪಾಲಿಗೆ ಚುನಾವಣೆ ಅಗ್ನಿಪರೀಕ್ಷೆಯಾಗಿದೆ. ವೈಯಕ್ತಿಕವಾದ ಯಾವುದೇ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಗೆಲುವಿಗಾಗಿ ಶ್ರಮಿಸುವಂತೆ ಮನವಿ ಮಾಡಿದರು.
::: ಗಮನ ಸೆಳೆದ ಸಾಧು :::
ಚಲನಚಿತ್ರ ನಟ, ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಸಾಧು ಕೋಕಿಲ ಅವರು ಹಾಡು ಹೇಳಿ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಗಮನ ಸೆಳೆದರು.
ಸಮಾವೇಶದಲ್ಲಿ ಜಿ.ಪಂ. ಮಾಜಿ ಸದಸ್ಯ ರಾಜಾರಾವ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಸರ ಚಂಗಪ್ಪ, ಪಂಕಜ, ಪಿ.ಕೆ.ಸಿದ್ದಪ್ಪ, ಮೀದೇರಿರ ನವೀನ್, ಪಟ್ಟಡ ರಂಜಿ ಪೂಣಚ್ಚ, ಇಸ್ಮಾಯಿಲ್ ನಾಪೋಕ್ಲು,
ಬಿ.ಎನ್.ಪ್ರಥ್ಯು ಮೊದಲಾದವರು ಭಾಗವಹಿಸಿದ್ದರು.
ಪಕ್ಷದ ಪ್ರಮುಖರಾದ ಉಮೇಶ್ ಕೇಚಮ್ಮಯ್ಯ ಸ್ವಾಗತಿಸಿ, ಪಕ್ಷದ ವಕ್ತಾರ ಆಪಟ್ಟಿರ ಟಾಟು ಮೊಣ್ಣಪ್ಪ ಮತ್ತು ಜಿಪಂ ಮಾಜಿ ಉಪಾಧ್ಯಕ್ಷೆ ಕಾವೇರಿ ಕಾರ್ಯಕ್ರಮ ನಿರೂಪಿಸಿದರು.
::: ಬೃಹತ್ ಮೆರವಣಿಗೆ :::
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಎಂಎಲ್‍ಸಿ ಸಿ.ಎಸ್.ಅರುಣ್ ಮಾಚಯ್ಯ, ಕೆಪಿಸಿಸಿ ವಕ್ತಾರ ಎ.ಎಸ್.ಪೊನ್ನಣ್ಣ, ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಸಂಕೇತ್ ಪೂವಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ವಿವಿಧ ಘಟಕದ ಅಧ್ಯಕ್ಷರು, ಪೊನ್ನಂಪೇಟೆ ಬ್ಲಾಕ್ ಎಸ್‍ಟಿ ಘಟಕದ ಅಧ್ಯಕ್ಷ ಮಣಿಕುಂಞ ಸೇರಿದಂತೆ ಹಲ ಗಣ್ಯರ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಗಿರಿಜನರು ಇಲ್ಲಿನ ತಹಶೀಲ್ದಾರ್ ಕಚೇರಿಯಿಂದ ಕೊಡವ ಸಮಾಜದ ಸಭಾಂಗಣದವರೆಗೆ ಕಾಂಗ್ರೆಸ್ ಪರವಾದ ಘೋಷಣೆಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಿ ಗಮನ ಸೆಳೆದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*