ಮಡಿಕೇರಿ ಮಾ.24 : ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 04-06-2022 ರಿಂದ 03-03-2023 ರ ವರೆಗೆ ಪತ್ತೆ ಮಾಡಲಾಗಿದ್ದ 22 ಅಕ್ರಮ ಗಾಂಜಾ ಮಾರಾಟ ಪ್ರಕರಣಗಳಲ್ಲಿ 60 ಆರೋಪಿಗಳನ್ನು ದಸ್ತಗಿರಿ ಮಾಡಿ ವಶಪಡಿಸಿಕೊಂಡಿದ್ದ ಒಟ್ಟು 26.750 ಕೆ.ಜಿ. ಗಾಂಜಾ ಹಾಗೂ 1.161 ಕೆ.ಜಿ ಹಶಿಶ್ ಆಯಿಲ್ ನ್ನು ದಿನಾಂಕ: 24-03-2023 ರಂದು ಮೈಸೂರು ಜಿಲ್ಲೆಯ ಗುಜ್ಜೆಗೌಡನಪುರ ಗ್ರಾಮದಲ್ಲಿರುವ M/s. GIPS Bio Tech ಸಂಸ್ಥೆಯ ಕುಲುಮೆಯಲ್ಲಿ (Incinerator) ಡ್ರಗ್ ಡಿಸ್ಪೋಸಲ್ ಸಮಿತಿ ಮೂಲಕ ನಾಶಪಡಿಸಲಾಯಿತು. ಈ ಸಂದರ್ಭ ದಕ್ಷಿಣ ವಲಯ ಐ.ಜಿ.ಪಿ ಯವರಾದ ಪ್ರವೀಣ್ ಮಧುಕರ್ ಪವಾರ್, ಐ.ಪಿ.ಎಸ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಐ.ಪಿ.ಎಸ್ ಹಾಗೂ ಡ್ರಗ್ ಡಿಸ್ಪೋಸಲ್ ಸಮಿತಿ ಸದಸ್ಯರು ಹಾಜರಿದ್ದರು.