ಮಡಿಕೇರಿ ಮಾ.27 : ಚೆಟ್ಟಳ್ಳಿಯ ಲಕ್ಷ್ಮಿ ಫಂಡಿನ ಸಭೆಯು ಫಂಡಿನ ಅಧ್ಯಕ್ಷರಾದ ಪುತ್ತರಿರ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು.
ನಂತರ ಪ್ರತೀ ವರ್ಷದಂತೆ ಈ ಬಾರಿಯೂ ಅತೀ ಹೆಚ್ಚು ಅಂಕ ಪಡೆದ ಪುತ್ತರಿರ ಇಂದೂ ದೇವಯ್ಯಳಿಗೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ರಾಜ್ಯಪ್ರಶಸ್ತಿ ವಿಜೇತರಾದ ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ ಅವರನ್ನು ಹಿರಿಯರಾದ ನಿವೃತ್ತ ವಾಯುಸೇನಾಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ, ಬಟ್ಟೀರ ವೇಣುನಾಚಪ್ಪ ಸನ್ಮಾನಿಸಿ ಗೌರವಿಸಿದರು.
ಸಂಘದ ವರದಿಯನ್ನು ಕಾರ್ಯದರ್ಶಿ ಬೊಪ್ಪಟಿರ ನಾಣಯ್ಯ ಓದಿದರು. ಊರಿನ ಪುತ್ತರಿರ,ಬಟ್ಟೀರ, ಮುಳ್ಳಂಡ ಹಾಗೂ ಬೊಪ್ಪಟೀರ ಕುಟುಂಬದ ಸದಸ್ಯರು ಹಾಜರಿದ್ದರು. ಸಂಘದ ಉಪಾಧ್ಯಕ್ಷ ಮುಳ್ಳಂಡ ಕರಣ್ ಸೋಮಣ್ಣ ವಂದಿಸಿದರು.









