ಚೆಯ್ಯಂಡಾಣೆ ಮಾ.27 : ಎಡಪಾಲದ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್.ಎಸ್.ಎಫ್ ಸಂಯುಕ್ತ ಆಶ್ರಯದಲ್ಲಿ 101 ಕುಟುಂಬಕ್ಕೆ ರಂಝಾನ್ ಪ್ರಯುಕ್ತ ಆಹಾರ ದಾನ್ಯಗಳ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಮಸೀದಿಯ ಖತೀಬ್ ನಿಝಾರ್ ಪೈಝಿ ಅಂಡತ್ ಮಾನಿ ದರ್ಗಾದಲ್ಲಿ ಪ್ರಾರ್ಥನೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು.ಶಾಫಿ, ಎಡಪಾಲ ಕರ್ನಾಟಕ ಮುಸ್ಲಿಂ ಜಮಾಆತ್ ಅಧ್ಯಕ್ಷ ಉಮ್ಮರ್ ಸಿಆರ್ ಪಿ, ಎಸ್ ವೈ ಎಸ್ ಅಧ್ಯಕ್ಷ ಶರೀಫ್ ಝೈನಿ, ಎಸ್ ಎಸ್ ಎಫ್ ಅಧ್ಯಕ್ಷ ಶಂಸುದ್ದಿನ್, ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಸಿ.ಎ.ಅಬೂಬಕ್ಕರ್, ಪದಾಧಿಕಾರಿಗಳಾದ ಬಷೀರ್, ಖಾದರ್ ಸಅದಿ, ಮಹ್ಮೂದ್ ಮತ್ತಿತರರು ಹಾಜರಿದ್ದರು.
ವರದಿ : ಅಶ್ರಫ್









