ಸೋಮವಾರಪೇಟೆ ಮಾ.27 : ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಮಾತ್ರ ಶೈಕ್ಷಣಿಕ ಸಾಧನೆ ಸಾದ್ಯ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಸಮೀಪದ ಬಿ.ಟಿ.ಸಿ.ಜಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣ, ಹೆಚ್ಚುವರಿ ತರಗತಿ ಕಟ್ಟಡ ಮತ್ತು ಕಂಪ್ಯೂಟರ್ ಲ್ಯಾನ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಾಮಾಜಿಕವಾಗಿ, ದೈಹಿಕವಾಗಿ ಸದೃಢರಾದರೆ ಎಲ್ಲ ಕೆಲಸಗಳನ್ನು ಆಸಕ್ತಿಯಿಂದ ಮಾಡಬಹುದು.ಇಲ್ಲವಾದರೆ ಕೀಳರಿಮೆ ಉಂಟಾಗಲಿದೆ.ವೈಯಕ್ತಿಕ ಅಭಿವೃದ್ಧಿಯತ್ತ ಹೆಚ್ಚಿನ ಆಸಕ್ತಿ ವಹಿಸಿಕೊಳ್ಳಬೇಕಾಗಿದೆ ಆಗ ಮಾತ್ರ ಕಷ್ಟ ಬಂದಾಗ ಎದುರಿಸಲು ಸಾದ್ಯ. ಹಾಗಾಗಿಯೇ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತಚಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚು ಪ್ರಬಲರಾಗಿರುತ್ತಾರೆ.ಇದು ದೊಡ್ಡಮಟ್ಟದ ಸಾಧನೆ ಮಾಡಲು ಸಾದ್ಯ ಗುರುಗಳು ಕೂಡ ತಾವು ಕಲಿಸಿದ ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ದಾರೆಯೆರೆದರೆ ಅವರ ಜ್ಞಾನಮಟ್ಟದ ಜೋತೆಯಲ್ಲಿ ಸಾಧಿಸುವ ಛಲ ಸದೃಡವಾಗಲಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ, ಕಾಲೇಜಿನ ಮಕ್ಕಳ ಹಿತದೃಷ್ಟಿಯಿಂದ ಕಂಪ್ಯೂಟರ್ ಕಲಿಕಾ ಜ್ಞಾನದ ದೃಷ್ಟಿಯಿಂದ ಲ್ಯಾಬ್ ಅನ್ನು ಪ್ರಾರಂಭಿಸಲಾಗಿದೆ.ಈ ಕಾಲೇಜಿನ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಎಂ.ಎಸ್ ಶಿವಮೂರ್ತಿ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಧನಲಕ್ಷ್ಮಿ ವಹಿಸಿದ್ದರು.
ಹಾನಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಪಾಂಡಿಯನ್, ಉಪಾಧ್ಯಕ್ಷ ಮಿಥುನ್, ಪಿಡಿಒ ಅಸ್ಮಾ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸೋಮೇಶ್, ಗ್ರಾಮ ಪಂಚಾಯತಿ ಸದಸ್ಯರು, ಧರ್ಮಸ್ಥಳ ಸ್ವಸಹಾಯ ಸಂಘದ ಶೌರ್ಯ ತಂಡದ ಸದಸ್ಯರು, ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.












