ಮಡಿಕೇರಿ ಮಾ.28 : ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಗೋವಾದಲ್ಲಿ ನಡೆದ ಯೋನೆಕ್ಸ್ ಸನ್ ರೈಸ್ 45ನೇ ಇಂಡಿಯನ್ ಶಿಪ್‍ನಲ್ಲಿ ಕೊಡಗಿನ ತಾತಪಂಡ ಜ್ಯೋತಿ ಸೋಮಯ್ಯ ಸಾಧನೆ ಮಾಡಿದ್ದು, ವಿಶ್ವ ಚಾಂಪಿಯನ್ ಶಿಪ್‍ಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
55+ ವಿಭಾಗದಲ್ಲಿ ಸಿಂಗಲ್ಸ್‍ನಲ್ಲಿ ಜ್ಯೋತಿ ಸೋಮಯ್ಯ ಅವರು ರನ್ನರ್ ಅಪ್ ಆಗಿ ಬೆಳ್ಳಿ ಪದಕ ಹಾಗೂ ಡಬಲ್ಸ್‍ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಈ ಸಾಧನೆಯೊಂದಿಗೆ ಇವರು ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಬಿ.ಡಬ್ಲ್ಯು.ಎಫ್ ವಿಶ್ವ ಚಾಂಪಿಯನ್ ಶಿಪ್ 2023ಕ್ಕೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಜ್ಯೋತಿ ಅವರು ಸಿಂಗಲ್ಸ್‍ನಲ್ಲಿ ಫೈನಲ್‍ನಲ್ಲಿ ಪ್ರಬಲ ಪ್ರತಿಸ್ಪರ್ಧಿ ವಿರುದ್ಧ ಆಡಿದ್ದು, ಅಲ್ಪ ಪಾಯಿಂಟ್‍ನಿಂದ ಸೋಲು ಅನುಭವಿಸಿದರೂ, ಈ ಸಾಧನೆ ತೃಪ್ತಿ ತಂದಿದೆ ಎಂದಿದ್ದಾರೆ.








