ವಿರಾಜಪೇಟೆ ಮಾ.28 : ನಲ್ವತ್ತೋಕ್ಲು(ಚೋಕಂಡಹಳ್ಳಿ) ಮೊಯಿದ್ದೀನ್ ಜುಮಾ ಮಸೀದಿಥಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ದುದ್ದಿಯಂಡ ಹೆಚ್.ಸೂಫಿ ಹಾಜಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಮಸೀದಿ ಆವರಣದಲ್ಲಿ ನಡೆದ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಸಾಲಿಗೂ ಸೂಫಿ ಹಾಜಿ ಅವರನ್ನೇ ಮುಂದುವರಿಸಲು ನಿರ್ಧರಿಸಿದ ಸದಸ್ಯರು, ಅವರನ್ನು ಅವಿರೋಧವಾಗಿ ಆಯ್ಕೆಮಾಡಿದರು.
ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಡಿ.ಎಫ್. ಅಶ್ರಫ್ ಅಲಿ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಎಂ. ಯೂಸುಫ್, ಸಹ ಕಾರ್ಯದರ್ಶಿಯಾಗಿ ಪಿ.ಎ. ಬಷೀರ್ ಆಯ್ಕೆಗೊಂಡಿದ್ದಾರೆ. ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಿ.ಹೆಚ್. ಸಮದ್, ಕೆ.ಎಂ. ಫಸಿ, ಪಿ.ಎ. ಮಜೀದ್, ಕೆ.ಎಂ. ಹ್ಯಾರಿಸ್, ಡಿ.ಎಂ. ಸಿರಾಜ್, ಕೆ.ಎಂ. ಸಾಬಾನ್, ಎಂ.ಎ. ಶಫೀಕ್ ಮತ್ತು ಟಿ.ಎಂ. ಹಾಷಿಮ್ ನೇಮಕಗೊಂಡಿದ್ದಾರೆ.









