ಮಡಿಕೇರಿ ಮಾ.29 : ಕೊಡಗು ಜಿಲ್ಲೆಗೆ ಸೀಮಿತವಾಗಿ ಪ್ರಣಾಳಿಕೆ ತಯಾರಿಸಲು ಜಿಲ್ಲಾ ಆಮ್ ಆದ್ಮಿ ಪಾರ್ಟಿ ಜನಾಭಿಪ್ರಾಯ ಸಂಗ್ರಹ ಸಭೆ ನಡೆಸಿತು.
ಪೊನ್ನಂಪೇಟೆಯ ಐಬಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡು ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಪ್ರತಿ ತಾಲ್ಲೂಕಿನಲ್ಲಿ ಉನ್ನತ ದರ್ಜೆಯ ಕಾಲೇಜು, ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲ್ಲಿ ಗ್ರಾಮ ಕ್ಲಿನಿಕ್ ಆರಂಭ, ಕಂದಾಯ ಇಲಾಖೆಯಲ್ಲಿ ರೈತರ ಪಹಣಿ, ಆರ್.ಟಿ.ಸಿ, ಸರ್ವೆ ಕಾರ್ಯ ಸರಿಪಡಿಸುವುದು, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ, ವಿದ್ಯುತ್ ವ್ಯತ್ಯಾಸ ಮತ್ತು ಕೊರತೆ ನೀಗಿಸುವುದು, ಕೊಡಗಿನ ವಿಧಾನಸಭಾ ಕ್ಷೇತ್ರಗಳನ್ನು ಕನಿಷ್ಠ ಮೂರಕ್ಕೆ ಏರಿಕೆ ಮಾಡುವುದು, ಜಿಲ್ಲೆಯ ಭಾಷೆ, ಸಂಸ್ಕೃತಿಗೆ ಒತ್ತು ನೀಡುವುದು, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು, ಗುಡಿಸಲು ಮುಕ್ತ ಗ್ರಾಮ ಸೇರಿದಂತೆ ಹಲವು ಪ್ರಗತಿಪರ ವಿಚಾರಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸುವ ಬಗ್ಗೆ ಸಲಹೆಗಳು ಕೇಳಿ ಬಂತು.
ಪಕ್ಷದ ಜಿಲ್ಲಾಧ್ಯಕ್ಷ ಬೋಜಣ್ಣ ಸೋಮಯ್ಯ ಕಾರ್ಯದರ್ಶಿ ಹೆಚ್.ಬಿ.ಪೃಥ್ವಿ. ಸಂಘಟನಾ ಕಾರ್ಯದರ್ಶಿ ಎಂ.ಕೆ.ಅಪ್ಪಯ್ಯ, ಪೊನ್ನಪ್ಪ, ರವೀಂದ್ರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.








