ಮಡಿಕೇರಿ ಮಾ.30 : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಾ ಕೋಶ , ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್.ಎಸ್.ಎಸ್ ಘಟಕದ ವತಿಯಿಂದ ಯುವಜನತೆಯಲ್ಲಿ ಹೆಚ್.ಐ.ವಿ. / ಏಡ್ಸ್ ಜಾಗೃತಿ ‘ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಆಪ್ತ ಸಮಾಲೋಚನಾ ಕೇಂದ್ರದ ಸಮಾಲೋಚಕ ಕೆ.ಟಿ.ಚಿಟ್ಟಿಯಪ್ಪ ಮಾತನಾಡಿ, ಇಂದಿನ ಯುವ ಜನತೆಯು ರಕ್ತದಾನದ ಮಹತ್ವವನ್ನು ಅರ್ಥೈಸಿಕೊಂಡು ಇದರ ಬಗೆಗಿನ ಅಪನಂಬಿಕೆಗಳನ್ನು ಬಿಟ್ಟು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದರು.
ಯೌವನದ ಕ್ಷಣಿಕ ಸುಖಕ್ಕಾಗಿ ಹೆಚ್.ಐ.ವಿ. / ಏಡ್ಸ್ ನಂತಹ ಮಹಾಮಾರಿಯನ್ನು ಮೈಮೇಲೆ ಎಳೆದು ಕೊಳ್ಳದೇ , ಶಿಸ್ತು ಬದ್ಧತೆ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಸಿ.ದಯಾನಂದ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುಣ – ನಡತೆಗಳೊಂದಿಗೆ ರಕ್ತದಾನ, ಹೆಚ್.ಎ.ವಿ. /ಏಡ್ಸ್ ಸಾಂಕ್ರಾಮಿಕತೆಯ ವಿಚಾರಗಳನ್ನು ತಿಳಿದು ಸಮಾಜದಲ್ಲಿ ಅದರ ಬಗ್ಗೆ ಅರಿವು ಮೂಡಿಸಲು ಕರೆ ನೀಡಿದರು .
ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್.ಎಸ್.ಎಸ್ . ಘಟಕದ ಸಂಚಾಲಕರಾದ ಎಂ.ಬಿ.ದಿವ್ಯ ಸ್ವಾಗತಿಸಿದರು . ದ್ವಿತೀಯ ಬಿ.ಎ.ವಿದ್ಯಾರ್ಥಿ ಹೆಚ್.ಎ.ಅಜಿತ್ ನಿರೂಪಿಸಿದರು. ಮಂಜುಳ ವಂದಿಸಿದರು.