ಮಡಿಕೇರಿ ಮಾ.31 : ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಶೀಘ್ರ ನೋಂದಣಿಗೆ ಅನುವಾಗುವಂತೆ ಏಪ್ರಿಲ್, 21 ರಿಂದ ನೋಂದಣಿ ಕಚೇರಿಗಳಲ್ಲಿ ಪ್ರಸ್ತುತ ಬಳಸಲಾಗುತ್ತಿರುವ ಗಣಕೀಕೃತ ನೋಂದಣಿ ಪ್ರಕ್ರಿಯೆಯಲ್ಲಿ ಕಾಲೋಚಿತ ಸುಧಾರಣೆಗಳೊಂದಿಗೆ ‘ಕಾವೇರಿ-2’ ಸುಲಭ ನೋಂದಣಿ ತಂತ್ರಾಂಶ ಜಾರಿಗೊಳಿಸಲಾಗುತ್ತಿದೆ.
ಸಾರ್ವಜನಿಕರು ಸುಧಾರಿತ ಕಾವೇರಿ-2 ವನ್ನು ವ್ಯಾಪಕವಾಗಿ ಬಳಸಲು ಅನುವಾಗುವಂತೆ ತಂತ್ರಾಂಶದ ಬಳಕೆಯ ಕುರಿತು ಸಂಕ್ಷಿಪ್ತ ತರಬೇತಿ ಕಾರ್ಯಕ್ರಮವು ಏಪ್ರಿಲ್, 1 ರಂದು ಮಧ್ಯಾಹ್ನ 3 ಗಂಟೆಗೆ ಪ್ರವಾಸೋದ್ಯಮ ಇಲಾಖೆಯ (ವಾರ್ತಾ ಭವನ ಹತ್ತಿರ) ಮೊದಲನೇ ಮಹಡಿಯ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನಡೆಯಲಿದೆ.
ನೋಂದಣಿ ಇಲಾಖೆಯ ಸೇವೆಯನ್ನು ಬಳಸುವ ಎಲ್ಲರೂ ತಪ್ಪದೇ ಭಾಗವಹಿಸಿ ಕಾರ್ಯಕ್ರಮದ ಗರಿಷ್ಟ ಫಲ ಪಡೆಯಬಹುದು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿ ಅವರು ತಿಳಿಸಿದ್ದಾರೆ.









