ಮಡಿಕೇರಿ ಏ.2 : ಪುರಾತನ ಕಾಲದ ದೇವಾಲಯದ ಜೀರ್ಣೋದ್ಧಾರದ ಸಂದರ್ಭ ಚೋಳರ ಕಾಲದ ಚಿನ್ನದ ನಾಣ್ಯಗಳು ಪತ್ತೆಯಾಗಿದೆ. ಕುಣಿಗಲ್ ತಾಲ್ಲೂಕಿನ ಅಮೃತೂರು ನರಸಿಂಹಸ್ವಾಮಿ ದೇವಾಲಯದಲ್ಲಿ ಕಾಮಗಾರಿ ನಡೆಸುತ್ತಿದ್ದಾಗ ಮಡಿಕೆಯಲ್ಲಿ 65 ಚಿನ್ನದ ನಾಣ್ಯಗಳಿರುವುದು ಕಂಡು ಬಂದಿದೆ.
ಅಮೃತೂರಿನ ದೊಡ್ಡಕೆರೆ ಆಲದ ಮರದ ಬಳಿ ಇರುವ ಪುರಾತನ ಚೋಳರಕಾಲದ ಶ್ರೀ ನರಸಿಂಹಸ್ವಾಮಿ ದೇವಾಲಯ ಇದಾಗಿದೆ. ಶಿಥಿಲಗೊಂಡ ಕಾರಣ ಜೀರ್ಣೋದ್ಧಾರ ಕಾರ್ಯ ನಡೆಸಲಾಗುತ್ತಿತ್ತು.












