ಮಡಿಕೇರಿ ಏ.3 : ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹುಣುಸೂರು ಬಳಿ ನಡೆದಿದೆ.
ಕೇರಳದ ಕಣ್ಣೂರಿನ ನಿವಾಸಿ ಶ್ರೀಧರನ್ ಅವರ ಪುತ್ರ ರಾಜೇಶ್(43) ಎಂಬುವವರೇ ಮೃತರು.
ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಜೇಶ್ ಊರಿಗೆ ತೆರಳಲು ಪ್ರಯಾಣ ಬೆಳೆಸಿದ್ದರು. ಹುಣಸೂರು ಬಳಿ ಬರುತ್ತಿದ್ದ ವೇಳೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು, ಬಸ್ ಚಾಲಕ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರೂ ಬದುಕುಳಿಯಲಿಲ್ಲ.








