ನವದೆಹಲಿ ಏ.3 : ನೆರೆಯ ರಾಷ್ಟç ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಹಣದುಬ್ಬರವು ಶೇಕಡಾ 35.37ಕ್ಕೆ ತಲುಪಿದೆ. ಆಹಾರಕ್ಕಾಗಿ ನೂಕುನುಗ್ಗಲು ಉಂಟಾಗಿ ಕಳೆದ ಹತ್ತು ದಿನಗಳಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ.
ಮಾರ್ಚ್ನಲ್ಲಿ ಸಾರಿಗೆ ಬೆಲೆಗಳು ಶೇಕಡಾ 54.94 ರಷ್ಟು ಏರಿಕೆಯಾಗಿದ್ದು, ಮಾರ್ಚ್ನಲ್ಲಿ ಆಹಾರ ಹಣದುಬ್ಬರವು ಶೇಕಡಾ 47.15 ರಷ್ಟು ಏರಿಕೆಯಾಗಿದೆೆ. ಬಟ್ಟೆ ಮತ್ತು ಶೂಗಳ ಬೆಲೆಗಳು 21.93 ಶೇಕಡಾ, ವಸತಿ, ನೀರು ಮತ್ತು ವಿದ್ಯುತ್ ಬೆಲೆಗಳು 17.49 ರಷ್ಟು ಹೆಚ್ಚಾಗಿದೆ. ಆಹಾರ ಸಾಮಾಗ್ರಿಗಳ ಬೆಲೆ ಕೈಗೆಟುಕದಷ್ಟು ದುಬಾರಿಯಾಗಿದೆ. ಒಟ್ಟಿನಲ್ಲಿ ಪಾಕ್ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ.













