ಸುಂಟಿಕೊಪ್ಪ ಏ.3 : ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸದಾ ನಾವು ಸಿದ್ಧರಿದ್ದೇವೆ ಎಂದು ಕೊಡಗು ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಕೈಗಾರಿಕಾ ರಕ್ಷಣಾ ಪಡೆ ಸಿಬ್ಬಂದಿಗಳು ಜಂಟಿಯಾಗಿ ಸುಂಟಿಕೊಪ್ಪದಲ್ಲಿ ಪಥಸಂಚಲನ ನಡೆಸಿ ಗಮನ ಸಳೆದರು.
ಸೋಮವಾರ ಸಂಜೆ ಗದ್ದೆಹಳ್ಳದ ಬಳಿ ಆನೇಕ ಪೊಲೀಸ್ ವಾಹನಗಳು ಏಕಾಏಕಿ ನಿಂತವಲ್ಲದೆ ನೂರಾರು ಮಂದಿ ಸಮವಸ್ತç ಧರಿಸಿದ ಸಾಲಾಗಿ ಇಳಿದರು. ಕೆಲವೇ ಕ್ಷಣಗಳಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಕುಶಾಲನಗರ ವಿಭಾಗದ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ವೃತ್ತನಿರೀಕ್ಷಕರಾದ ಬಿ.ಜಿ.ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಡಿ.ಎಸ್.ಪುನೀತ್ ಅವರೊಂದಿಗೆ ಸಿಐಎಫ್‌ನ ಅಧಿಕಾರಿ ಚೌಹಣ್ 100 ಕ್ಕೂ ಹೆಚ್ಚು ಮಂದಿಯ ಶಸ್ತಾçಸಜ್ಜಿತÀ ತುಕಡಿ ಸುಂಟಿಕೊಪ್ಪದ ಮುಖ್ಯ ರಸ್ತೆಯಲ್ಲಿ ಸಾಗಿದ ಪಥಸಂಚಲನ 1ನೇ ವಿಭಾಗದ ಗುಡ್ಡಪ್ಪ ರೈ ಬಡಾವಣೆ, ಪಂಪ್‌ಹೌಸ್, ಮಧುರಮ್ಮ ಬಡಾವಣೆಗಾಗಿ ಸಾಗಿ ಮರಳಿ ಪೊಲೀಸ್ ಠಾಣೆಯಲ್ಲಿ ಪೂರ್ಣಗೊಂಡಿತು.
ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಸುಂದರ್‌ರಾಜ್ ಅವರು ಕೊಡಗಿನ ಜನತೆ ಶಾಂತಿ ಪ್ರಿಯರು, ಮಾತ್ರವಲ್ಲದೆ ಚುನಾವಣಾ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವವರಾಗಿದ್ದಾರೆ. ಆದರೂ ಸಮಾಜದಲ್ಲಿ ಕೆಲವು ಕೀಡಿಗೇಡಿಗಳು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವವರು ಇರುತ್ತಾರೆ. ಇಂತಹವರಿಗೆ ಎಚ್ಚರಿಕೆ ಹಾಗೂ ಶಾಂತಿ ಪ್ರಿಯ ಜನರಿಗೆ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಇಂದಿನ ಪಥಸಂಚಲನ ಮಾಡಿದ್ದೇವೆ ಎಂದು ಹೇಳಿದರು.
ಸೋಮವಾರಪೇಟೆ, ಬಜೆಗುಂಡಿ, ಮಾದಾಪುರ, ಸುಂಟಿಕೊಪ್ಪ ಕುಶಾಲನಗರದಲ್ಲಿ ಪಥಸಂಚಲನ ನಡೆಯಲಿದೆ ಎಂದು ಮಾಹಿತಿ ನೀಡಿದರು.










