ಮಡಿಕೇರಿ ಏ.4 : ಬಸ್ ವೊಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ಹೊರ ವಲಯದ ಆಸ್ಪತ್ರೆ ಬಳಿ ಮಂಗಳವಾರ ನಡೆದಿದೆ.
ಮಾಡ್ರಹಳ್ಳಿ ಗ್ರಾಮದ ರಾಜು(45) ಮೃತ ವ್ಯಕ್ತಿಯಾಗಿದ್ದು, ಮತ್ತೊಂದು ಬೈಕ್ ಸವಾರ ಕಿಲಗೆರೆ ಗ್ರಾಮದ ವೆಂಕಟಯ್ಯ(70) ಎಂಬುವವರ ಬಲಗಾಲು ತುಂಡಾಗಿದೆ.
ಗುಂಡ್ಲುಪೇಟೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಅರುಣಾಚಲ ಪ್ರದೇಶ ಮೂಲದ ಬಸ್ ಎರಡು ಬೈಕ್ ಗಳಿಗೆ ಡಿಕ್ಕಿಯಾಗಿದ್ದು, ಘಟನೆ ನಡೆದ ತಕ್ಷಣ ಚಾಲಕ ಹಾಗೂ ನಿರ್ವಾಹಕ ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








