ಮಡಿಕೇರಿ ಏ.5 : ಕೊಡಗು ರಕ್ಷಣಾ ವೇದಿಕೆ, ಮಡಿಕೇರಿ ನಗರ ಆಟೋ ಚಾಲಕರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧ್ಯಕ್ಷರಾಗಿ ಸುಲೇಮಾನ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ವರ್ಗೀಸ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್, ಕಾರ್ಯದರ್ಶಿಯಾಗಿ ಯಕ್ಷಿತ್, ಖಜಾಂಚಿಯಾಗಿ ರಫೀಕ್, ಸಂಘಟನಾ ಕಾರ್ಯದರ್ಶಿ ಫಯಾಜ್ ನೇಮಕಗೊಂಡಿದ್ದಾರೆ.
ನಿರ್ದೇಶಕರುಗಳಾದ ಇಮ್ರಾನ್, ಅಕ್ರಂ, ನವೀನ, ಕೆ.ಕೆ.ಶರೀಫ್, ನಿಯಾಜ್ (ಅಣ್ಣ), ಸುಲ್ತಾನ್, ಬಿ.ಎಂ.ಸತೀಶ್, ಮುಕುಂದ, ನೌಶಾದ್, ಅಲ್ಮಾಸ್, ಶರೀಫ್, ಹರ್ಷ, ದಾವುದ್, ಇರ್ಫಾನ್, ಅಶ್ರಫ್, ಜಮೀಲ್ ಆಯ್ಕೆಯಾಗಿದ್ದಾರೆ ಎಂದು ಕೊರವೇ ಅಧ್ಯಕ್ಷ ಅಚ್ಚಂಡಿರ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.







