ಮಡಿಕೇರಿ ಏ.8 : ನಗರದ ಶ್ರೀ ಮುತ್ತಪ್ಪನ್ ಕ್ಷೇತ್ರಂನ ಪುನರ್ ಪ್ರತಿಷ್ಟಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವ ಅಂಗವಾಗಿ ಸಂಜೆ ಕಲಶ ಹಾಗೂ ತಾಲಾ ಪೊಲಿ ಮೆರವಣಿಗೆ ನಡೆಯಿತು.
ನಗರದ ಗಾಂಧಿ ಮೈದಾನದಿಂದ ಆರಂಭಗೊಂಡ ಮೆರವಣಿಗೆಗೆ ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುದೀರ್, ಪ್ರಮುಖರಾದ ಕೆ.ಎಸ್.ರಮೇಶ್, ಉನ್ನಿಕೃಷ್ಣ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ವಿ.ಹಿಂ.ಪ ಪ್ರಮುಖರಾದ ಸುರೇಶ್ ಮುತ್ತಪ್ಪ ಹಿಂದೂ ಮಲಯಾಳಿ ಸಂಘದ ವಾಸುದೇವ್, ಚೇತನ್ ಇನ್ನಿತರರು ಇದ್ದರು.
ಮೆರವಣಿಗೆಯಲ್ಲಿ ಕಡಗದಾಳು, ನೀರುಕೊಲ್ಲಿ, ಸಂಪಿಗೆಕಟ್ಟೆ, ಕೆಎಸ್‌ಆರ್‌ಟಿಸಿ, ಸಂಪಿಗೆಕಟ್ಟೆ, ಕೆಎಸ್‍ಆರ್‍ಟಿಸಿ ಡಿಪೋ ಮುಂಭಾಗ, ಮೈತ್ರಿ ಜಂಕ್ಷನ್‍ನಿಂದ ಆಗಮಿಸಿದ್ದ ಮುತ್ತಪ್ಪ ದೇವರ ಕಶದೊಂದಿಗೆ ಮಹಿಳೆಯರು ಹಾಗೂ ಮಕ್ಕಳು ತಾಲಾ ಪೊಲಿಯೊಂದಿಗೆ ಭಾಗವಹಿಸಿದ್ದರು.
ಮಂಗಳೂರಿನ ಕಲಾತಂಡಗಳು, ಮುತ್ತಪ್ಪ ದೇವರ ಮೂರ್ತಿಯ ಮಂಟಪದೊಂದಿಗೆ ಚಂಡೆ, ವಾದ್ಯಗಳು ಮೆರವಣಿಗೆಯನ್ನು ಮುನ್ನಡೆಸಿದವು. ವಾಹನ ದಟ್ಟಣೆಯ ನಡುವೆ ಸಾಗಿದ ಮೆರವಣಿಗೆ ಮುತ್ತಪ್ಪ ದೇವಾಲಯದಲ್ಲಿ ಸಮಾಪನಗೊಂಡಿತು. ನಂತರ ಮುತ್ತಪ್ಪ ಜಾತ್ರಾ ಮಹೋತ್ಸವ ನಡೆಯಿತು.