ಮಡಿಕೇರಿ ಏ.8 : ಆಸಕ್ತಿಯಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದೆoದು ಒಲಂಪಿಯನ್‌ಗಳಾದ ಮನೆಯಪಂಡ ಸೋಮಯ್ಯ ಹಾಗೂ ಅಂಜಪರವoಡ ಸುಬ್ಬಯ್ಯ ಅವರುಗಳು ಕರೆ ನೀಡಿದರು.
ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇಲ್ಲಿನ ಜ.ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ದಿ.ಶಂಕರ್ ಸ್ವಾಮಿ ಸ್ಮರಣಾರ್ಥ ಉಚಿತ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಬಾಗವಹಿಸಿ ಅವರು ಮಕ್ಕಳಿಗೆ ಹಿತವಚನ ನುಡಿದರು. ಸೊಮಯ್ಯ ಮಾತನಾಡಿ ಇಂತಹ ಶಿಬಿರಗಳಿಂದ ಸಾಕಷ್ಟು ಕಲಿಯಬಹುದಾಗಿದೆ. ಜೀವನದಲ್ಲಿ ಐದು ಎಸ್‌ಗಳನ್ನು, ಅಂದರೆ ‘ಸ್ಪೀಡ್, ಸ್ಟ್ರೇಂತ್, ಸ್ಟೆಮಿನಾ, ಸ್ಕಿಲ್ ಹಾಗೂ ಸ್ಪೋರ್ಟ್ಸ್ಮೆನ್‌ಶಿಪ್’ ಇವುಗಳನ್ನು ಅಳವಡಿಸಿಕೊಂಡರೆ ಉತ್ತಮ ಕ್ರಿಡಾಪಟು ಹಾಗೂ ಉತ್ತಮ ಮನುಜನಾಗಲು ಸಾಧ್ಯವಾಗುತ್ತದೆ. ಉತತಮ ಭವಿಷ್ಯ ರುಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಎ.ಬಿ.ಸುಬ್ಬಯ್ಯ ಮಾತನಾಡಿ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಉತ್ತಮ ಪ್ರಜೆಯಾಗಲು ಸಾಧ್ಯ. ಸಮಾಜದಲ್ಲೂ ಗುರುತಿಸಲ್ಪಡುತ್ತಾರೆ, ಮಕ್ಕಳು ಟಿವಿ, ಮೊಬೈಲ್ ಬಿಟ್ಟು ಮೈದಾನಕ್ಕೆ ಬರಬೇಕು. ಶಾರೀರಿಕ ದೃಢತೆ ಇದ್ದರೆ ಜೀವನವನ್ನು ಸಂತೋಷದಿoದ ಕಳೆಯಬಹುದು. ಕ್ರಿಡೆಯಿಂದ ಇದು ಸಾಧ್ಯವಾಗಲಿದೆ. ಶಿಬಿರದಲ್ಲಿ ಕಲಿಸುವದನ್ನು ನಿರಂತರ ಅಭ್ಯಾಸ ಮಾಡಬೇಕು. ಇಲ್ಲಿ ತರಬೇತುದಾರರು ತಮ್ಮ ಸಮಯವನ್ನು ನಿಮಗಾಗಿ ಮೀಸಲಿರಿಸಿ ಕಲಿಸಿಕೊಡುತ್ತಿದ್ದಾರೆ. ಇದು ನಿಮ್ಮ ಜೀವನದಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಬಿರದ ಸಂಚಾಲಕ ಬಾಬು ಸೊಮಯ್ಯ, ತರಬೇತುದಾರರಾದ ಬೊಪ್ಪಂಡ ಶಾಂ ಪೂಣಚ್ಚ, ಕಿರುಂದoಡ ಗಣೇಶ್, ಕುಡೆಕಲ್ ಸಂತೋಷ್, ಅಶೋಕ್ ನಾಯ್ಡು, ಹರೇಂದ್ರ ಇದ್ದರು.
Breaking News
- *ಮಡಿಕೇರಿ : ಕನ್ನಡ ಅನ್ನದ ಭಾಷೆಯಾಗಬೇಕು : ವೆಂಕಟೇಶ ಪ್ರಸನ್ನ*
- *ಸೋಮವಾರಪೇಟೆ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪ್ರದೀಪ್ ಪುನರಾಯ್ಕೆ*
- *ಹೊನ್ನಮ್ಮನ ಕೆರೆ ದೇವಾಲಯದಲ್ಲಿ ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ ಕಾರ್ಯಕ್ರಮ*
- *ಅಜಿಲ ಯಾನೆ ನಲಿಕೆ ಸಮಾಜ ಸೇವಾ ಸಮಿತಿಯ 9ನೇ ವಾರ್ಷಿಕೋತ್ಸವ : ಸಾಧಕರಿಗೆ ಸನ್ಮಾನ*
- *ಮಿನಿ ಒಲಿಂಪಿಕ್ಸ್ ಫುಟ್ಬಾಲ್ : ಫೈನಲ್ ಗೆ ಆಯ್ಕೆಯಾದ ಕೊಡಗು ಬಾಲಕರ ತಂಡ*
- *ಎಸ್.ಕೆ.ಎಸ್.ಎಸ್.ಎಫ್ ಸಿದ್ದಾಪುರ ವಲಯ ಮಟ್ಟದ ಇಸ್ಲಾಮಿಕ್ ಕಲೋತ್ಸವ : ಸಿದ್ದಾಪುರ ಯೂನಿಟ್ ಚಾಂಪಿಯನ್ಸ್*
- ಕರ್ನಾಟಕ ತಂಡದ ನಾಯಕಿಯಾಗಿ ಕೊಡಗು ವಿದ್ಯಾಲಯದ ಪರ್ಲಿನ್ ಪೊನ್ನಮ್ಮ
- *ಕುಶಾಲನಗರದಲ್ಲಿ ಕಾವೇರಿ ನದಿಗೆ 166ನೇ ಮಹಾಆರತಿ*
- *ವಿರಾಜಪೇಟೆಯಲ್ಲಿ ಎಂಡಿಎಂಎ ಮತ್ತು ಗಾಂಜಾ ಸಾಗಾಟ : ಐವರ ಬಂಧನ*
- *ಗುಡ್ಡೆಹೊಸೂರು : ರಾಷ್ಟ್ರೀಕೃತ ಬ್ಯಾಂಕ್ ಮಾದರಿಯ ಡಿಜಿಟಲೀಕರಣ ವ್ಯವಸ್ಥೆ ಸಹಕಾರಿ ಕ್ಷೇತ್ರದ ಬ್ಯಾಂಕಿಂಗ್ ನಲ್ಲೂ ಅತ್ಯಗತ್ಯ : ಎಂ.ಎಂ.ಶ್ಯಾಮಲ*