ಮಡಿಕೇರಿ ಏ.9 : ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕೊಡವ ಕುಟುಂಬಗಳ ನಡುವಿನ 23ನೇ ವರ್ಷದ ಪ್ರತಿಷ್ಠಿತ ‘ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆ’ಯಲ್ಲಿ ಕುಪ್ಪಂಡ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಎದುರಾಳಿ ತಂಡದ ವಿರುದ್ಧ ಸಮಬಲ ಪ್ರದರ್ಶನ ನೀಡಿದರೂ ಶೂಟ್‌ಔಟ್‌ನಲ್ಲಿ ಕೇವಲ 2 ಗೋಲು ದಾಖಲಿಸಿದ ಕುಲ್ಲೇಟಿರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಇಂದು ನಡೆದ ಅಂತಿಮ ಪಂದ್ಯಾವಳಿಯನ್ನು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಅವರು ಬೆಳ್ಳಿಯ ಹಾಕಿ ಸ್ಟಿಕ್‌ನಿಂದ ಬೆಳ್ಳಿಯ ಹಾಕಿ ಚೆಂಡನ್ನು ಹೊಡೆಯುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಬಳಿಕ ನಡೆದ ರೋಚಕ ಪಂದ್ಯಾಟದಲ್ಲಿ ಕುಪ್ಪಂಡ ತಂಡ ಮೊದಲ ಕ್ವಾಟರ್‌ನಲ್ಲಿ 1 ಗೋಲು ಗಳಿಸಿ ಮುನ್ನಡೆ ಪಡೆಯಿತು. ರಭಸದ ಪ್ರದರ್ಶನ ನೀಡಿದ ಕುಲ್ಲೇಟಿರ ತಂಡ ದ್ವಿತೀಯಾರ್ಧದಲ್ಲಿ ಎದುರಾಳಿ ಕುಪ್ಪಂಡ ವಿರುದ್ದ 1 ಗೋಲು ದಾಖಲಿಸಿ ಸಮಬಲ ಸಾಧಿಸಿತು. ಆದರೆ ನಿಗಧಿತ ಅವಧಿಯಲ್ಲಿ ಇತ್ತಂಡಗಳಿಗೆ ಒಟ್ಟು 11 ಪೆನಾಲ್ಟಿ ಕಾರ್ನರ್ ಅವಕಾಶ ದೊರೆಯಿತಾದರೂ, ಯಾವುದೇ ಗೋಲು ದಾಖಲಿಸದ ಕಾರಣ ಪಂದ್ಯ ಡ್ರಾ ಆಯಿತು. ಈ ಹಿನ್ನೆಯಲ್ಲಿ ವಿಜೇತ ತಂಡವನ್ನು ನಿರ್ಧರಿಸಲು ಶೂಟ್‌ಔಟ್ ಅಳವಡಿಸಲಾಯಿತು. ಶೂಟ್‌ಔಟ್‌ನಲ್ಲಿ ಕುಪ್ಪಂಡ ತಂಡ ಒಟ್ಟು 4 ಗೋಲು ಬಾರಿಸಿದರೆ, ಕುಲ್ಲೇಟಿರ ತಂಡ ಕೇವಲ 2 ಗೋಲು ಗಳಿಸಿ ಸೋಲು ಕಂಡಿತು. ಆ ಮೂಲಕ ಕುಪ್ಪಂಡ ತಂಡ 2023ರ ಬಲಿಷ್ಟ ತಂಡವಾಗಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
::: ಬಹುಮಾನ ವಿತರಣೆ :::
ಚಾಂಪಿಯನ್ ತಂಡಕ್ಕೆ 3 ಲಕ್ಷ ರೂ. ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ 2 ಲಕ್ಷ ರೂ. ನಗದು ಹಾಗೂ ಟ್ರೋಫಿಗಳನ್ನು ಗಣ್ಯರು ವಿತರಿಸಿ ಶುಭಕೋರಿದರು. ಕುಲ್ಲೇಟಿರ ತಂಡದ ಅವನೀಶ್ ಮಂದಪ್ಪ ಅವರು ಪಂದ್ಯ ಶ್ರೇಷ್ಟ ಹಾಗೂ ಕುಪ್ಪಂಡ ಸೋಮಯ್ಯ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಬಾಜನರಾದರು. ಸೋಮಯ್ಯ ಅವರಿಗೆ 1 ಲಕ್ಷ ರೂ. ನಗದು ಹಾಗೂ ಟ್ರೋಫಿ ಹಾಗೂ ಅವನೀಶ್ ಮಂದಪ್ಪ ಅವರಿಗೆ 50 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು. ಚಾಂಪಿಯನ್ ಮತ್ತು ರನ್ನರ್ಸ್ ತಂಡದ ಆಟಗಾರಿರಿಗೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಯಿತು.
::: ಸ್ಥಾನಕ್ಕಾಗಿ ಪೈಪೋಟಿ :::
ಮಾಜಿ ಚಾಂಪಿಯನ್ ನೆಲ್ಲಮಕ್ಕಡ ತಂಡ ಮತ್ತೊಂದು ಮಾಜಿ ಚಾಂಪಿಯನ್ ಪಳಂಗಂಡ ತಂಡವನ್ನು 1-0 ಗೋಲ್‌ನಿಂದ ಸೋಲಿಸುವ ಮೂಲಕ 3ನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಸೆಮಿ ಫೈನಲ್‌ನಲ್ಲಿ ಪರಾಭವಗೊಂಡ 2 ತಂಡಗಳ ನಡುವೆ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ನಡೆದ ಪಂದ್ಯದ ಮೊದಲಾರ್ಧದಲ್ಲೇ ನೆಲ್ಲಮಕ್ಕಡ ತಂಡದ ಪ್ರತೀಕ್ ಪೊನ್ನಣ್ಣ ಗೋಲ್ ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಪಂದ್ಯಾವಳಿಯ ಕೊನೆಯವರೆಗೂ ಪ್ರಯತ್ನಿಸಿದ ಪಳಂಗಂಡ ತಂಡದಿಂದ ಒಂದೂ ಗೋಲು ದಾಖಲಾಗಲಿಲ್ಲ. ಪಂದ್ಯದಲ್ಲಿ ಜಯಗಳಿಸಿದ ನೆಲ್ಲಮಕ್ಕಡ ತಂಡ 3ನೇ ಬಹುಮಾನ ಪಡೆದರೆ ಪಳಂಗಂಡ ತಂಡ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮೂರನೇ ಸ್ಥಾನ ಪಡೆದ ನೆಲ್ಲಮಕ್ಕಡ ತಂಡಕ್ಕೆ ರೂ.1 ಲಕ್ಷ ನಗದು ಮತ್ತು ಟ್ರೋಫಿ ಹಾಗೂ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ ಪಳಂಗಂಡ ತಂಡಕ್ಕೆ 50 ಸಾವಿರ ರೂ. ನಗದು, ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು.
Breaking News
- *ಕನಕದಾಸರು ಕೀರ್ತನೆಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು : ಶಾಸಕ ಡಾ.ಮಂತರ್ ಗೌಡ*
- *ಜೋಡುಬೀಟಿ- ಕುಂದ ಸಂಪರ್ಕ ರಸ್ತೆಗೆ ನಾಯಕ್ ಕೂಕಂಡ ಎನ್.ಪೊನ್ನಪ್ಪ ನಾಮಕರಣ : ಎಲ್ಲೆಡೆ ವೀರಯೋಧರಿಗೆ ಗೌರವಸಲ್ಲಿಸುವ ಕಾರ್ಯವಾಗಬೇಕು : ಕೊಟ್ಟುಕತ್ತಿರ ಸೋಮಣ್ಣ*
- *ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಗ್ಗಳಕ್ಕೆ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ*
- *ನ.19 ರಂದು ಮಡಿಕೇರಿ ತಲುಪಲಿದೆ ಮದ್ರಾಸ್ ಎಂಜಿನಿಯರಿಂಗ್ ಆರ್ಮಿ ಗ್ರೂಪ್ನ ಬೈಕ್ ರ್ಯಾಲಿ*
- *ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಕನಕದಾಸ ಜಯಂತಿಯ ಅರ್ಥಪೂರ್ಣ ಆಚರಣೆ : ದಾಸ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಕನಕದಾಸರು : ಮೇಜರ್ ಡಾ.ರಾಘವ ಶ್ಲಾಘನೆ*
- *ನ.21 ರಂದು ಮಡಿಕೇರಿಯಲ್ಲಿ ರಕ್ತದಾನ ಮತ್ತು ಕಣ್ಣು ತಪಾಸಣಾ ಶಿಬಿರ*
- *ಮಡಿಕೇರಿಯಲ್ಲಿ ವಕೀಲರ ಕ್ರೀಡಾಕೂಟ : ಕ್ರೀಡಾ ಸ್ಫೂರ್ತಿ ಜೀವನಕ್ಕೂ ಸ್ಫೂರ್ತಿಯಾಗಲಿ : ಶಾಸಕ ಡಾ.ಮಂತರ್ ಗೌಡ*
- ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್ ನ ವಾಷಿ೯ಕ ಸಮ್ಮೇಳನ : ಕಾಫಿ ಕೃಷಿಕರ ನೆರವಿಗೆ ಸಕಾ೯ರ ಧಾವಿಸಬೇಕು : ಮ್ಯಾಥ್ಯು ಅಬ್ರಾಹಂ*
- *ಡಾ.ಸೂರ್ಯ ಕುಮಾರ್ ಅವರ “ಮಂಗಳಿ” ಪುಸ್ತಕ ಬಿಡುಗಡೆ*
- *ಸಿದ್ದಾಪುರದಲ್ಲಿ ನೃತ್ಯ ಸಂಭ್ರಮ : ಗಮನ ಸೆಳೆದ ನೃತ್ಯ ವೈಭವ*