ಮಡಿಕೇರಿ ಏ.9 : ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ನಡೆಸಿರುವ 5, 7, 10 ಹಾಗೂ 12ನೇ ತರಗತಿಗಳ ಪಬ್ಲಿಕ್ ಪರೀಕ್ಷೆಯಲ್ಲಿ ಜಿಲ್ಲೆಯ 2800 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ಮಟ್ಟದ RANK ಪಟ್ಟಿ ಈ ಕೆಳಗಿನಂತಿದೆ.
12ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಪಾಲಿಬೆಟ್ಟ ಮದ್’ರಸ ವಿದ್ಯಾರ್ಥಿನಿಗಳಾದ ಇರ್ಫಾನ ಹಾಗೂ ರಿಝ್ವಾನಾ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದರೆ ಫಾರಿಸಾ ಆಝಾದ್ ನಗರ ತೃತೀಯ ಸ್ಥಾನವನ್ನು ಪಡೆದರು.
10ನೇ ತರಗತಿಯಲ್ಲಿ ಫರೀದಾ ಕುಂಜಿಲ ಪ್ರಥಮ ಸ್ಥಾನ ಗಳಿಸಿದರೆ ನಾಪೋಕ್ಲುವಿನ ಝಿಯಾ ಝೈನಬ ಹಾಗೂ ಅಮ್ಮತ್ತಿಯ ಮುಹಮ್ಮದ್ ಅಜ್’ನಾಸ್ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡರು.
ಏಳನೇ ತರಗತಿಯಲ್ಲಿ ರಿಶಾನಾ ಪಾಲಿಬೆಟ್ಟ ಹಾಗೂ ಫಾತಿಮಾ ಐಫಾ ಆಝಾದ್ ನಗರ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದರೆ ಮೂರ್ನಾಡುವಿನ ಹಬೀಬ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು.
ಐದನೇ ತರಗತಿಯಲ್ಲಿ 7ನೇ ಹೊಸಕೋಟೆಯ ಇಝಾನ್ ಫೆಬಿನ್ ಪ್ರಥಮ ಸ್ಥಾನವನ್ನು ಪಡೆದರೆ ಮುಹಮ್ಮದ್ ಆಶಿಖ್ ಕೊಂಡಂಗೇರಿ ಹಾಗೂ ಮಾಪಿಳೆತ್ತೋಡುವಿನ ರೈಹಾನ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಗಳಿಸಿಕೊಂಡರು.
ಎಲ್ಲಾ ವಿಜೇತರಿಗೂ ಎಸ್.ಜೆ.ಎಂ. ಕೊಡಗು ಜಿಲ್ಲಾ ಸಮಿತಿಯು ಅಭಿನಂದನೆಗಳನ್ನು ಸಲ್ಲಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
-ಅಶ್ರಫ್ ಸಖಾಫಿ
ಪ್ರ. ಕಾರ್ಯದರ್ಶಿ
ಎಸ್.ಜೆ.ಎಂ. ಕೊಡಗು ಜಿಲ್ಲೆ.