ಮಡಿಕೇರಿ ಏ.13 : ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಇವರ ವತಿಯಿಂದ, ಮತದಾನದ ಜಾಗೃತಿ ಸಾರುವ ನಿಟ್ಟಿನಲ್ಲಿ ನಗರದ ಚೇಂಬರ್ ಆಫ್ ಕಾಮರ್ಸ್ ಮಡಿಕೇರಿ, ಸ್ವಾಮಿ ವಿವೇಕಾನಂದ ಯೂಥ್ ಮೂವ್‍ಮೆಂಟ್ ಇವರ ಸಹಯೋಗದೊಂದಿಗೆ, ಮುಂಬರುವ ವಿಧಾನಸಭಾ ಚುನಾವಣೆ ಯ ಮತದಾನ ಜಾಗೃತಿ ಅಭಿಯಾನವನ್ನು ಬೈಕ್ ಜಾಥಾದ ಮೂಲಕ ಆಯೋಜಿಸಲಾಗಿದೆ.
ಬೈಕ್ ಜಾಥಾವು ಇದೇ ಏಪ್ರಿಲ್, 16 ರಂದು ಬೆಳಗ್ಗೆ 10 ಗಂಟೆಗೆ ನಗರದ ಬನ್ನಿಮಂಟಪದಿಂದ ಪ್ರಾರಂಭಗೊಂಡು ರಾಜಾಸೀಟು ಉದ್ಯಾನವನದಲ್ಲಿ ಕೊನೆಗೊಳ್ಳಲಿದೆ. ಈ ಮತದಾನ ಜಾಗೃತಿ ಬೈಕ್ ಜಾಥಾದಲ್ಲಿ ವರ್ತಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.









