ಮಡಿಕೇರಿ ಏ.14 : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಹೋರಾಟವನ್ನೆ ಕಂಡಿರುವ ಮಹಾ ಚೇತನ. ಅವರನ್ನು ಒಂದು ವರ್ಗಕ್ಕೆ ಸಿಮೀತಗೊಳಿಸದೇ ಅವರ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳುವಂತಾಗಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 132ನೇ ಜನ್ಮ ಜಯಂತಿ ಪ್ರಯುಕ್ತ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಮಂತ್ರಗಳನ್ನು ದೇಶಕ್ಕೆ ನೀಡಿದ್ದಾರೆ. ತುಳಿತಕ್ಕೆ ಒಳಗಾದವರಿಗೆ, ಅಸ್ಪøಷ್ಯರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯವನ್ನು ನೀಡುವ ಕೆಲಸ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಹೋರಾಟ ನಡೆಸಿದ್ದಾರೆ.
ರಾಷ್ಟ್ರೀಯವಾದಿಯಾಗಿ, ಕಾನೂನು ತಜ್ಞರಾಗಿ, ರಾಜಕೀಯ ನೇತರರಾಗಿ, ಕ್ರೀಯಾಶಿಲ ಸಮಾಜಿಕ ಕಾರ್ಯಕರ್ತನಾಗಿ, ಚಿಂತಕರಾಗಿ, ಇತಿಹಾಸಕಾರರಾಗಿ, ಮಹಾನ್ ದಾರ್ಶನಿಕರಾಗಿ, ಸಮೃದ್ದ ಬರಹಗಾರರಾಗಿ, ಬೌಧ ಧರ್ಮದ ಪುನರುಜೀವನಕ್ಕಾಗಿ, ಮಾನವ ಶಾಸ್ತ್ರಜ್ಞಾರಾಗಿ, ವಾಕ್‍ಪಟುವಾಗಿ, ಅರ್ಥಶಾಸ್ತ್ರಜ್ಞರಾಗಿ, ಸಂವಿಧಾನದ ಪ್ರಮುಖ ಶಕ್ತಿಯಾಗಿ ಮಹತ್ತರ ಸಾಧನೆ ಮಾಡಿದ್ದಾರೆ.
ತಮ್ಮ 65 ವರ್ಷದ ಜೀವಿತಾವಧಿಯಲ್ಲಿ ವಿಶ್ವ ಕಂಡು ಕೆಳಯರಿಯದ ದೊಡ್ಡ ಸಾಧನೆ ಮಾಡಿದ ಮಾನವತವಾದಿಯಾಗಿದ್ದಾರೆ. ಅಂಬೇಡ್ಕರ್ ಹಾಗೂ ಮಹತ್ಮಗಾಂಧಿ ಅವರ ಚಿಂತನೆಗಳಲ್ಲಿ ವ್ಯತ್ಯಾಸಗಳಿದ್ದರೂ ಇಬ್ಬರ ಗುರಿ ಒಂದೇ ಆಗಿತ್ತು. ಇಂತಹ ಮಹಾನ್ ವ್ಯಕ್ತಿಗಳ ವಿಚಾರ ಧಾರೆಗಳನ್ನು ಆಳವಾಗಿ ಅಧ್ಯಯನ ನಡೆಸಿ ಮುಂದಿನ ಪಿಳಿಗೆಗೆ ತಿಳಿಯಪಡಿಸಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಪ್ರಜಾಪ್ರಭುತ್ವದ ಪ್ರಮುಖ ಅಂಶಗಳಾದ ಸಮಾನತೆ, ಸಾಮಾಜಿಕ ನ್ಯಾಯದಂತಹ ಮಾನವೀಯ ಮೌಲ್ಯಗಳನ್ನು ಎಲ್ಲರಿಗೂ ದೊರಕಿಸಿಕೊಡುವಲ್ಲಿ ಅಂಬೇಡ್ಕರ್ ಅವರ ಪಾತ್ರ ಪ್ರಮುಖ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಈ ದೇಶಕ್ಕೆ ಕೊಟ್ಟ ಸಂವಿಧಾನ ಇಡೀ ದೇಶ ಮೆಚ್ಚುವಂತದ್ದು, ಅವರ ಹೋರಾಟದ ಫಲವಾಗಿ ಇಂದು ದೇಶಾದ್ಯಂತ ಕೋಟ್ಯಂತರ ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ ಎಂದರು.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಮಾತನಾಡಿ, ಜನಸಾಮ್ಯರ ಒಳಿತಿಗಾಗಿ ಕಠಿಣ ಪರಿಶ್ರಮದಿಂದ ದೇಶದ ಉಜ್ವಲ ಭವಿಶ್ಯಕ್ಕಾಗಿ ಅಡಿಪಾಯ ಹಾಕಿಕೊಟ್ಟಿದ್ದಾರೆ. ಮೀಸಲಾತಿಯ ಮೂಲಕ ಎಲ್ಲರೂ ಸಮಾನವಾಗಿ ಬದುಕಲು ಅವಕಾಶವನ್ನು ಕಲ್ಪಿಸಿದ್ದಾರೆ. ಇಂತಹ ಮಹಾ ಚೇತನರ ಭಾವಚಿತ್ರವನ್ನು ಪ್ರತಿಮನೆಗಳಲ್ಲಿ ಅಳವಡಿಸುವಂತಾಗಬೇಕು ಎಂದು ಕರೆ ನೀಡಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯರಿಗೆ ಕಾನೂನಾತ್ಮಕ ಗೌರವ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದರು. ಮಹಿಳಾ ಸ್ವಾತಂತ್ರ್ಯ ಮತ್ತು ಮಹಿಳಾ ಸಾಕ್ಷರತೆಯ ಮಹತ್ವ ಒತ್ತಿ ಹೇಳಿದರು. ಜೊತೆಗೆ ಮಹಿಳೆಯರಿಗೆ ಪುರುಷರ ಸಮಾನದ ಹಕ್ಕನ್ನು ಕಾನೂನಾತ್ಮಕ ನೆಲೆಯಲ್ಲಿ ಒದಗಿಸಿಕೊಟ್ಟಿದ್ದಾರೆ ತಿಳಿಸಿದರು.
ರಾಜೀವ್ ಗಾಂಧಿ ಪಂಚಯತ್‍ರಾಜ್ ಸಂಘಟನೆಯ ಸಂಯೋಜಕ ತೆನ್ನಿರಾ ಮೈನಾ ಮಾತನಾಡಿ, ಶಾಂತಿಯುತ ಹೋರಾಟದಿಂದ ಕಾನೂನಾತ್ಮಕ ಸುಧಾರಣೆಗಳಿಂದ ಪ್ರಜಾಪ್ರಭುತ್ವದ ಯಶಸ್ಸಿಗೆ ಅಡಿಪಾಯ ಹಾಕಿಕೊಟ್ಟ ಕೀರ್ತಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಪ್ರತಿಯೊಬ್ಬ ವ್ಯಕ್ತಿ ಈ ದೇಶದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದರು. ಅಲ್ಲದೆ ಅಂಬೇಡ್ಕರ್ ಅವರ ಜೀವನ ಚರಿತೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ನಗರಾಧ್ಯಕ್ಷ ರಾಜೇಶ್ ಯಲ್ಲಪ್ಪ, ಕಾಂಗ್ರೆಸ್ ಎಸ್.ಸಿ.ಘಟಕದ ಉಪಾಧ್ಯಕ್ಷ ಆರ್.ಪಿ.ಚಂದ್ರಶೇಖರ್, ಮಡಿಕೇರಿ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಬಿ.ಎನ್.ಮುದ್ದುರಾಜು, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಾಜ್ ಹೊಸೂರು, ಡಿಸಿಸಿ ಸದಸ್ಯರಾದ ಪುಷ್ಪ ಪೂನಾಚ್ಚ, ವೆಂಕಟೇಶ್, ಖಲೀಲ್ ಭಾಷ, ನವೀನ್ ಕುಶಾಲಪ್ಪ, ಮುದ್ದಯ್ಯ ತೋರೆರ, ವಿ.ಪಿ.ಸುರೇಶ್, ಫ್ಯಾನ್ಸಿ ಬೆಳ್ಯಪ್ಪ, ಪ್ರೇಮ ಕೃಷ್ಣಪ್ಪ, ಜುಲೇಕಾಬಿ, ಪ್ರೇಮ ಲಿಂಗಪ್ಪ, ಸದಾಮುದ್ದಪ್ಪ, ಪ್ರಕಾಶ್ ಆಚಾರ್ಯ, ಕಾನೆಹಿತ್ಲು ಮೊಣ್ಣಪ್ಪ, ಮಿನಾಜ್ ಪ್ರವೀಣ್, ದಿವ್ಯ ಸ್ವರ್ಣಲತ ಸೇರಿದಂತೆ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಮಡಿಕೇರಿ ಎಸ್.ಸಿ.ಘಟಕದ ನಗರಾಧ್ಯಕ್ಷೆ ಹೆಚ್.ಪಿ.ಪೂರ್ಣಿಮಾ ಸ್ವಾಗತಿಸಿದರು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಗಿರೀಶ್ ಸರ್ವರನ್ನು ವಂದಿಸಿದರು.