ಸೋಮವಾರಪೇಟೆ ಏ.14 : ಸೋಮವಾರಪೇಟೆ ತಾಲ್ಲೂಕು ಅಂಬೇಡ್ಕರ್ ಯುವ ಸೇನೆ, ಹಾಗೂ ಬೆಟ್ಟದಳ್ಳಿ ಸಿದ್ದಾರ್ಥನಗರದ ಗ್ರಾಮಾಭಿವೃದ್ಧಿ ಸಮಿತಿ ಮತ್ತು ಮಾನವತಾ ಯುವಕ ಸಂಘ ವತಿಯಿಂದ ಪಟ್ಟಣದಲ್ಲಿ ದಾದಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ 132 ನೇ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಲಾಯಿತು.
ಪಟ್ಟಣದಲ್ಲಿ ಅಂಬೇಡ್ಕರ್ ಭಾವಚಿತ್ರದ ಟ್ಲಾಬ್ಲೊಗಳ ಮೆರವಣಿಗೆ ನಡೆಯಿತು. ಅಭಿಮಾನಿಗಳು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮಹಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಬಾಣಾವಾರ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭ ಪ್ರಮುಖರಾದ ಮಂಜುನಾಥ್, ಬಿ.ಇ.ಜಯೇಂದ್ರ, ಪ್ರವೀಣ್, ಮನೋಜ್, ರಾಮಚಂದ್ರ, ಎಂ.ಪಿ.ಹೊನ್ನಪ್ಪ, ಆನಂದ್, ರಾಜು, ರವಿ ಇದ್ದರು.










