ಮಡಿಕೇರಿ ಏ.14 : ಸಾಮಾಜದ ಸ್ವಾಸ್ಥ್ಯವನ್ನು ಹದಗೆಡಿಸುವ ಅಮಾನವೀಯವಾದ ‘ಸಾಮಾಜಿಕ ಬಹಿಷ್ಕಾರ’ ಕ್ಕೆ ತುತ್ತಾಗಿರುವ ಬಗ್ಗೆ ಸೋಮವಾರಪೇಟೆ ತಾಲ್ಲೂಕಿನ ಹರಗ ಗ್ರಾಮದ ಕುಟುಂಬವೊಂದು ಅಳಲು ತೋಡಿಕೊಂಡಿದೆ.
ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ಹರಗ ಗ್ರಾಮದ ಬಿ.ಡಿ.ಗಿರೀಶ ಅವರು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಮ್ಮ ಸಂಕಷ್ಟಗಳನ್ನು ತರೆದಿಟ್ಟರು.
ಪ್ರಸ್ತುತ ಸಣ್ಣ ಹಿಡುವಳಿ ಮಾಡಿಕೊಂಡು ಬದುಕುತ್ತಿರುವ ತಾನು, ತನ್ನ ಪತ್ನಿ ಬಿ.ಜಿ.ಪವಿತ್ರ, ತಾಯಿ ಬಿ.ಡಿ.ಹೂವಮ್ಮ ಅವರನ್ನು ಗ್ರಾಮದಲ್ಲಿ ಬಹಿಷ್ಕಾರಕ್ಕೆ ಒಳಪಡಿಸಲಾಗಿದೆ. ಸಾಮಾಜಿಕ ಬಹಿಷ್ಕಾರದ ಹಿನ್ನೆಲೆ ತಮ್ಮೊಂದಿಗೆ ಗ್ರಾಮಸ್ಥರಾರು ಮಾತನಾಡದಂತೆ, ಮಾತನಾಡಿದರೆ 10 ಸಾವಿರ ದಂಡ ವಿಧಿಸುವ ಬೆದರಿಕೆಯನ್ನು ಅಲ್ಲಿನ ಪ್ರಮುಖರು ಹಾಕಿದ್ದಾರೆ. ಇದರಿಂದ ಗ್ರಾಮಸ್ಥರಾರು ತಮ್ಮೊಂದಿಗೆ ಮಾತನಾಡುವುದಾಗಲಿ, ತಾವು ಇತರರ ಮನೆಗೆ ತೆರಳುವುದಾಗಲಿ ಸಾಧ್ಯವಾಗುತ್ತಿಲ್ಲ. ಕನಿಷ್ಟ ತೋಟದ ಕೆಲಸಕ್ಕೆ ಕಾರ್ಮಿಕರು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ತಿಳಿಸಿದರು.
ಗಿರೀಶ್ ಅವರು ಹೇಳುವಂತೆ ಸುಮಾರು ಎರಡು ದಶಕಗಳ ಹಿಂದೆ ತಮ್ಮ ತೋಟದ ಬದಿಯಲ್ಲಿನ ಸುಮಾರು ಎರಡೂವರೆ ಏಕರೆಯಷ್ಟು ಜಾಗಕ್ಕೆ ಬೇಲಿ ಹಾಕಿಕೊಂಡಿದ್ದು, ಕಳೆದ ವರ್ಷವಷ್ಟೆ ಅಲ್ಲಿ ಕಾಫಿ ತೋಟ ಮಾಡಲು ಕಾಡು ಕಡಿದು, ಕಾಫಿ ಗಿಡಗಳನ್ನು ಹಾಕಿದ್ದರು. ಈ ಹಂತದಲ್ಲಿ ಕೆಲವರು ನೀಡಿದ ದೂರಿನ ಹಿನ್ನೆಲೆ ಅರಣ್ಯ ಇಲಾಖಾ ಮಂದಿ ಸ್ಥಳಕ್ಕಾಗಮಿಸಿ, ಜಾಗವನ್ನು ತೆರವು ಮಾಡಿದ್ದರು.
ಈ ಘಟನಾವಳಿಗಳ ಬಳಿಕ ಗ್ರಾಮ ಹಿತ ಕಾಪಾಡುವುದಕ್ಕೆ ಇರುವ ಸಮಿತಿಯೊಂದರ ಪ್ರಮುಖರು, ಅರಣ್ಯ ಇಲಾಖಾ ಜಾಗ ಒತ್ತುವರಿ ಮಾಡಿದ ವಿಚಾರವನ್ನು ಮುಂದಿಟ್ಟುಕೊAಡು 50 ಸಾವಿರ ದಂಡ ವಿಧಿಸಿದರೆ, ಗ್ರಾಮದ ಮತ್ತೊಂದು ಸಮಿತಿ 25 ಸಾವಿರ ದಂಡ ವಿಧಿಸಿತು. ಇದನ್ನು ಪಾವತಿಸದಿದ್ದಲ್ಲಿ ಬಹಿಷ್ಕಾರ ಹಾಕುವುದಾಗಿ ತಿಳಿಸಿತ್ತು. ಇದೀಗ ದಂಡ ಪಾವತಿಸದ ಕಾರಣಕ್ಕಾಗಿ ನಮ್ಮ ಮೇಲೆ ಬಹಿಷ್ಕಾರ ಹಾಕಿ ಬದುಕನ್ನು ಅಸಹನೀಯ ಗೊಳಿಸಿರುವುದಾಗಿ ತಿಳಿಸಿದರು.
ತಮ್ಮ ಕುಟುಂಬದ ಮೇಲೆ ಬಹಿಷ್ಕಾರ ಹಾಕಿರುವ ಬಗ್ಗೆ ಸೋಮವಾರಪೇಟೆ ಠಾಣೆಗೆ ದೂರು ಸಲ್ಲಿಸಿದ್ದೇನೆ. ಈ ಹಿನ್ನೆಲೆ ಪೊಲೀಸರು ಗ್ರಾಮದ ಸಂಬಂಧಪಟ್ಟವರನ್ನು ಠಾಣೆಗೆ ಕರೆಸಿ, ವಿಚಾರಣೆ ನಡೆಸಿ ಬಹಿಷ್ಕಾರ ಹಾಕುವುದಿಲ್ಲವೆಂದು ಮುಚ್ಚಳಿಕೆಯನ್ನೂ ಬರೆಸಿಕೊಂಡಿದ್ದಾರೆ. ಹೀಗಿದ್ದೂ ತಮ್ಮ ಮೇಲೆ ಬಹಿಷ್ಕಾರ ಮುಂದುವರೆಯಿತು. ವಿಷಯಕ್ಕೆ ಸಂಬಂಧಿಸಿದಂತೆ ತಾಲ್ಲೂಕು ತಹಶೀಲ್ದಾರರು ಹಾಗೂ ಸೋಮವಾರಪೇಟೆ ಪೊಲೀಸರಿಗೆ ಮತ್ತೆ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲವೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಗಿರೀಶ ಅವರ ತಾಯಿ ಬಿ.ಡಿ.ಹೂವಮ್ಮ, ಪತ್ನಿ ಬಿ.ಜಿ.ಪವಿತ್ರ, ಅಕ್ಕ ಸಿ.ಟಿ.ಯಶೋಧ ಹಾಗೂ ತಂಗಿ ಬಿ.ಡಿ.ಜ್ಯೋತಿ ಉಪಸ್ಥಿತರಿದ್ದರು.
Breaking News
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಮಡಿಕೇರಿಯಲ್ಲಿ ಅನ್ನದಾನ*
- *ಜ.26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ*
- *ಹೆಗ್ಗಳ ಗ್ರಾಮದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ*
- *ಎನ್.ಯು.ನಾಚಪ್ಪ ವಿರುದ್ಧ ಪ್ರಕರಣ : ಮಡಿಕೇರಿ ಕೊಡವ ಸಮಾಜ ಖಂಡನೆ*
- *ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗೆ ಪಿ.ಹೆಚ್.ಡಿ ಪದವಿ*