ಮಡಿಕೇರಿ ಏ.15 : ದೂರದರ್ಶನ ಚಂದನ ವಾಹಿನಿಯ ಸೋದರ ಸಿರಿ ಕಾರ್ಯಕ್ರಮದಲ್ಲಿ ಇಂದು ಮಧ್ಯಾಹ್ನ 2-30 ಗಂಟೆಗೆ ಕೊಡವ ಕವಿಗೋಷ್ಠಿ ಹಾಗೂ ಕೊಡವ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಬೆಂಗಳೂರು ದೂರದರ್ಶನ ಚಂದನ ವಾಹಿನಿಯ ಪ್ರಕಟಣೆ ತಿಳಿಸಿದೆ.
ಮಧ್ಯಾಹ್ನ 2-30ಕ್ಕೆ ಪ್ರಸಾರವಾಗಲಿರುವ “ಸೋದರ ಸಿರಿ” ಕೊಡವ ಕಾರ್ಯಕ್ರಮದಲ್ಲಿ ಮುಲ್ಲೇಂಗಡ ಮಧೋಶ್ ಪೂವಯ್ಯ, ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಚಮ್ಮಟೀರ ಪ್ರವೀಣ್ ಉತ್ತಪ್ಪ, ತಂಬಾಂಡ ಡ್ಯಾನಿ ನಾಣಯ್ಯ ಹಾಗೂ ಬೊಟ್ಟಂಗಡ ಸುಮನ್ ಸೀತಮ್ಮ ಕವಿಗಳಾಗಿ ಕವನ ವಾಚನ ಮಾಡಲಿದ್ದಾರೆ ಹಾಗೂ ಮೊಣ್ಣಂಡ ಶೋಭ ಸುಬ್ಬಯ್ಯ ಮತ್ತು ತಂಡದವರಿಂದ ಕೊಡವ ಗೀತ ಗಾಯನ ಕಾರ್ಯಕ್ರಮ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.