ಸುಂಟಿಕೊಪ್ಪ,ಏ.15 : ಸುಂಟಿಕೊಪ್ಪ ಸಿ.ಎಸ್.ಐ. ವತಿಯಿಂದ ನೂತನ ದೇವಾಲಯ ಕಟ್ಟಡದ ಪ್ರತಿಷ್ಠಾಪನೆ ಹಾಗೂ ದೃಢೀಕರಣ ಸಂಸ್ಕಾರವು ವಿಶೇಷ ಪ್ರಾರ್ಥನೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ನೂತನವಾಗಿ ಸಿ.ಎಸ್.ಐ. ಸಭೆಯ ವತಿಯಿಂದ ಇಮ್ಯಾನೂವೆಲ್ ನೂತನ ದೇವಾಲಯದ ಲೋಕಾರ್ಪಣೆ ವಿಧಿ ವಿಧಾನಗಳ ಸಂದರ್ಭ ದೇವರ ವಾಕ್ಯದ ಸಂದೇಶವನ್ನು ಸಿ.ಐ.ಎಸ್., ಕೆ.ಎಸ್.ಡಿ. ಬಿಷೋಪ್ ರೈಟ್, ರೆವೆ, ಹೇಮಚಂದ್ರಕುಮಾರ್ ವಲಯದ ವಿವಿಧ ಭಾಗಗಳಿಂದ ಸಭಾಪಾಲಕರುಗಳು ಆರ್ಶಿವಚನ ನೀಡಿದರು.
ಕಾರ್ಯಕ್ರಮದಲ್ಲಿ ಸಿಎಸ್‍ಐ ಸಭೆಯ ಪದಾಧಿಕಾರಿಗಳು, ಮಂಗಳೂರು, ಉಡುಪಿ, ಕೊಡಗು, ಹಾಸನ, ಮೈಸೂರು, ಚಾಮರಾಜನಗರ ವಲಯದ ಅಧ್ಯಕ್ಷರುಗಳು, ಸಭೆಯಲ್ಲಿ ಸೇವೆ ಸಲ್ಲಿಸಿದ್ದ ಸಭಾಪಾಲಕರು ಹಾಗೂ ಸಭಾಪಾಲಕ ರೆವ.ಅಮೃತರಾಜ್, ಸಭಾಸೇವಕರ ಸಂಧ್ಯಾ ಸುಪ್ರೀತಾ ಪಾಲ್ಗೊಂಡಿದ್ದರು.









