ಸುಂಟಿಕೊಪ್ಪ,ಏ.15 : ಬುದ್ಧ ಪ್ರತಿಷ್ಠಾನ ಜಿಲ್ಲಾ ಶಾಖೆಯ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮ ದಿನವನ್ನು ಆಚರಿಸಲಾಯಿತು.
ಸುಂಟಿಕೊಪ್ಪ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಪ್ರಮುಖರಾದ ಹೆಚ್.ಟಿ.ಕಾವೇರಪ್ಪ ಉದ್ಘಾಟಿಸಿದರು.
ಬುದ್ಧ ಪ್ರತಿಷ್ಠಾನ ಜಿಲ್ಲಾ ಅಧ್ಯಕ್ಷ ಎಚ್.ಪಿ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನೆ ಸಂಚಾಲಕರು ಆದ ವಿಶ್ವ, ಕಾವೇರಪ್ಪ, ಸುರೇಶ್ ಹೆಚ್.ಎಂ. , ಎಸ್.ನಿಶಾಂತ್ , ಉಪಸ್ಥಿತರು ಇದ್ದರು.