ಮಡಿಕೇರಿ ಏ.19 : ಮಡಿಕೇರಿ 66/11ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್-10 ಕುಂಡಾಮೇಸ್ತ್ರಿ ಮತ್ತು ಎಫ್-11 ಗಾಳಿಬೀಡು ಫೀಡರ್ ನಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಏ.20 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಕುಂಡಾಮೇಸ್ತ್ರಿ, ಒಣಚಲು, ಗಾಳಿಬೀಡು, ಕಾಲೂರು, ಮೊಣ್ಣಂಗೇರಿ, ಮಾಂದಲ್‍ಪಟ್ಟಿ ರಸ್ತೆ, ದೇವಸ್ತೂರು, ಹೆಬೆಟ್ಟಗೇರಿ, ಅಬ್ಬಿಫಾಲ್ಸ್, ಆರ್‌ಟಿಓ ಹತ್ತಿರ, ನಂದಿಮೊಟ್ಟೆ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.







