ಸುಂಟಿಕೊಪ್ಪ,ಏ.20 : ಸುಂಟಿಕೊಪ್ಪ ಪಂಪ್‍ಹೌಸ್ ಬಡಾವಣೆಯ ಮನೆಯೊಂದರಲ್ಲಿ ಹಾವನ್ನು ಪಂಚಾಯಿತಿ ಸಿಬ್ಬಂದಿ ಹಾಗೂ ಉರಗ ಪ್ರೇಮಿ ಬಾಲು ರಕ್ಷಿಸಿದ್ದಾರೆ.
ಪಂಪ್ ಹೌಸ್ ಬಡಾವಣೆಯ ನಿವಾಸಿಗಳಾದ ರವಿ ಮತ್ತು ಮುರುಗೇಶ್ ಎಂಬವರ ಮನೆಯ ಸಮೀಪ ಇದ್ದ ಹಾವುನ್ನು ಸ್ಥಳಿಯರು ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಸ್ನೇಕ್ ಬಾಲು ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಬಾಲು ಹಾವನ್ನು ರಕ್ಷಿಸಿದ್ದಾರೆ.
ಬಿಸಿಲ ಬೇಗೆಗೆ ಹಾವುಗಳು ಮನೆಯ ಸಮೀಪ ಬರುತ್ತಿದ್ದು ಅವುಗಳಿಗೆ ಯಾವುದೇ ರೀತಿಯ ತೊಂದರೆ ಹಿಂಸೆ ನೀಡದೆ ಅವುಗಳನ್ನು ಕಂಡ ತಕ್ಷಣ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ 9380098500 ಬಾಲು ಅವರು ಮಾಹಿತಿ ನೀಡಿದರು.









