ಸೋಮವಾರಪೇಟೆ ಏ.21 : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 74 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, 60 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.81.08 ಫಲಿತಾಂಶ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ 49 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.90ರಷ್ಟು ಫಲಿತಾಂಶ ಗಳಿಸಿದೆ. ಕಲಾ ವಿಭಾಗದಲ್ಲಿ ಶೇ.64 ರಷ್ಟು ಫಲಿತಾಂಶ ಪಡೆದಿದೆ.
ವಾಣಿಜ್ಯ ವಿಭಾಗದಲ್ಲಿ 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 16 ವಿದ್ಯಾರ್ಥಿಗಳು ದ್ವಿತೀಯ ಹಾಗೂ 5 ವಿದ್ಯಾರ್ಥಿಗಳು ತೃತೀಯ ಶ್ರೇಣೀಯಲ್ಲಿ ಪಾಸಾಗಿದ್ದಾರೆ. ಕದಿಜತ್ ಶಿರಿನ್ 600ಕ್ಕೆ 492, ಎಚ್.ಆರ್.ಪೂಜಾ 486, ಎಸ್.ಪಿ.ಅಸ್ಮ 478 ಅಂಕಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ 25 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 8 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಎಂ.ಬಿಂದು 530 ಅಂಕಗಳಿಸಿ ಅತ್ತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕೆ.ಎಚ್.ಕೀರ್ತನ 496, ಎಸ್.ಕೆ.ನಿಶಾ 453 ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ತಾಲ್ಲೂಕು ಒಕ್ಕಲಿಗರ ಸಂಘದ ಬಿಟಿಸಿಜಿ ಪದವಿ ಪೂರ್ವ ಕಾಲೇಜಿಗೆ ಶೇ.90ರಷ್ಟು ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 54 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 45 ಮಂದಿ ಪಾಸಾಗಿದ್ದಾರೆ. 8ವಿದ್ಯಾರ್ಥಿಗಳು ಅತ್ತ್ಯುನ್ನತ ಶ್ರೇಣಿ, 23 ಉನ್ನತ ಶ್ರೇಣಿ, 14 ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ಧಾರೆ. ಬಿ.ಎಚ್.ಪ್ರನುತಾ 571(ಶೇ.95.16), ಪಿ.ಜೆ.ರಕ್ಷಿತ್ 570(ಶೇ.95), ಪೂರ್ವಿಕಾ 547(ಶೇ.91.16) ಅಂಕಗಳಿಸಿದ್ದಾರೆ.
ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿಗೆ ಶೇ.97ರಷ್ಟು ಫಲಿತಾಂಶ ದೊರೆತಿದೆ. ವಾಣಿಜ್ಯ ವಿಭಾಗದಲ್ಲಿ 90 ವಿದ್ಯಾರ್ಥಿಗಳಲ್ಲಿ 90 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.99 ಫಲಿತಾಂಶ ದೊರೆತ್ತಿದೆ. ವಿಜ್ಞಾನ ವಿಭಾಗದಲ್ಲಿ 40 ವಿದ್ಯಾರ್ಥಿಗಳಲ್ಲಿ 37ಮಂದಿ ಉತ್ತೀರ್ಣರಾಗಿ ಶೇ.93 ಫಲಿತಾಂಶ ಲಭಿಸಿದೆ. 33 ವಿದ್ಯಾರ್ಥಿಗಳು 84 ಅತ್ತ್ಯುನ್ನತ ಶ್ರೇಣಿ, 84 ಉನ್ನತಶ್ರೇಣಿ, 9 ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪಾವನಿ 574(ಶೇ.96), ಗ್ರೇಟಾ ಡಿಸೋಜ 574(ಶೇ.96), ವಿಜ್ಞಾನ ವಿಭಾಗದಲ್ಲಿ ಬಿ.ಆರ್.ಧನುಶ್ 559(ಶೇ.93),ಜಾನ್ಸನ್ ಅಂತೋಣಿ 558(ಶೇ.93) ಅಂಕ ಪಡೆದಿದ್ದಾರೆ.









