ನಾಪೋಕ್ಲು ಏ.23 : ರಂಜಾನ್ ಹಬ್ಬದ ಪ್ರಯುಕ್ತ ಮೂರ್ನಾಡು ಪಟ್ಟಣದಲ್ಲಿ ಮೈಮ ಸಂಘಟನೆ ವತಿಯಿಂದ ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸಲಾಯಿತು.
ನಿರಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘಟನೆಯ ಸೇವಾ ಕಾರ್ಯದ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಜಾನ್ ಹಬ್ಬದ ಅಂಗವಾಗಿ ಪರಸ್ಪರ ಶುಭಾಶಯ ಹಂಚಿಕೊಂಡರು.
ಈ ಸಂದರ್ಭ ಮೈಮಾ ಸಂಘಟನೆಯ ಅಧ್ಯಕ್ಷ ಖಾದರ್, ಕಾರ್ಯದರ್ಶಿ ನಿಚ್ಚು, ಉಪಾಧ್ಯಕ್ಷ
ಮಮ್ಮದಾಲಿ, ಸುಬ್ಹಾನ್ ಸೇರಿದಂತೆ ಮತ್ತಿತರರು ಹಾಜರಿದ್ದರು. (ವರದಿ : ಝಕರಿಯ ನಾಪೋಕ್ಲು)