ಸುಂಟಿಕೊಪ್ಪ ಏ.27 : ಸಮಾಜಘಾತುಕ ಶಕ್ತಿಗಳನ್ನು ತಡೆಯಲು ಕಾನೂನು ಸುವ್ಯವಸ್ಥೆ ಬಿಗಿಗೊಳಿಸುವ ನಿಟ್ಟಿನಲ್ಲಿ ಸುಂಟಿಕೊಪ್ಪ ಪಟ್ಟಣದಲ್ಲಿ ಪೊಲೀಸರು ಹಾಗೂ ಕೇಂದ್ರ ಕೈಗಾರಿಕ ರಕ್ಷಣಾ ಪಡೆ, ಇಂಡೋಟಿಬೆಟಿಯನ್ ಗಡಿ ರಕ್ಷಣಾಪಡೆ ಪಥ ಸಂಚಲನ ನಡೆಸಿದರು.
ಗದ್ದೆಹಳ್ಳದ ಬಳಿ ಕುಶಾಲನಗರ ವಿಭಾಗದ ಡಿವೈಎಸ್‍ಪಿ ಆರ್.ವಿ.ಗಂಗಾಧರಪ್ಪ, ವೃತ್ತನಿರೀಕ್ಷಕರಾದ ಬಿ.ಜಿ.ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಅವರೊಂದಿಗೆ ಸಿಐಎಫ್‍ನ ಅಧಿಕಾರಿ ಚೌಹಣ್ 100 ಕ್ಕೂ ಹೆಚ್ಚು ಮಂದಿಯ ಇಂಡೋಟಿಬೆಟಿಯನ್ ಗಡಿ ರಕ್ಷಣಾಪಡೆ ಪೊಲೀಸ್ ತುಕಡಿ ತಂಡದವರು ಸುಂಟಿಕೊಪ್ಪದ ಮುಖ್ಯ ರಸ್ತೆಯಲ್ಲಿ ಸಾಗಿ ಮಧುರಮ್ಮ ಬಡಾವಣೆಗಾಗಿ, ಪಂಪ್‍ಹೌಸ್, ಗುಡ್ಡಪ್ಪ ರೈ ಬಡಾವಣೆ, 1ನೇ ವಿಭಾಗಕ್ಕಾಗಿ ಸಾಗಿ ಮರಳಿ ಪೊಲೀಸ್ ಠಾಣೆಗೆ ಸಾಗಿದರು.
ಕೊಡಗಿನ ಜನತೆ ಶಾಂತಿ ಪ್ರಿಯರು ಮಾತ್ರವಲ್ಲದೆ ಚುನಾವಣಾ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವವರಾಗಿದ್ದಾರೆ ಆದರೂ ಸಮಾಜದಲ್ಲಿ ಕೆಲವು ಕೀಡಿಗೇಡಿಗಳು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಎಚ್ಚರಿಕೆ ಹಾಗೂ ಶಾಂತಿ ಪ್ರಿಯ ಜನರಿಗೆ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಪಥಸಂಚಲ ನಡೆಸಲಾಗಿದೆ.









