ಮಡಿಕೇರಿ ಮೇ 4 : ಮೂರ್ನಾಡುವಿನಲ್ಲಿ ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರ ಪರ ಮತಯಾಚನೆ ನಡೆಯಿತು.
ಜೆಡಿಎಸ್ ನ ವಿರಾಜಪೇಟೆ ಅಧ್ಯಕ್ಷ ಪಿ.ಎ.ಮಂಜುನಾಥ್ ಮಾತನಾಡಿ ಮಡಿಕೇರಿ ಕ್ಷೇತ್ರದಲ್ಲಿ ಮುತ್ತಪ್ಪ ಅವರಿಗೆ ಇರುವ ಜನಬೆಂಬಲ ನೋಡಿದರೆ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಭೇರಿ ಬಾರಿಸಲಿದ್ದಾರೆ. ಈ ಬಾರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ವಿರಾಜಪೇಟೆ ತಾಲೂಕು ಕಾರ್ಯದರ್ಶಿ ಹರ್ಷ ಟಿ.ಆರ್, ಯುವ ಘಟಕದ ಅಧ್ಯಕ್ಷ ಸೈಫೂದ್ದೀನ್, ಯೂಸೆಫ್ ಕೊಂಡAಗೇರಿ ಹಾಗೂ ಮುಖಂಡರಾದ ಬಲ್ಲಚಂಡ ಗೌತಮ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಾಸಿರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.











