ಮಡಿಕೇರಿ ಮೇ 4 : ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ದಿ ಶೂನ್ಯವಾಗಿದ್ದು, ಖಾಸಗಿ ಬಸ್ಸು ನಿಲ್ದಾಣವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ಆರೋಪಿಸಿದ್ದಾರೆ.
ವಿರಾಜಪೇಟೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗೋಣಿಕೊಪ್ಪ ವಾಣಿಜ್ಯ ನಗರಿಯಾಗಿದ್ದು ಪ್ರತಿದಿನ ಸಾವಿರಾರು ಸಾರ್ವಜನಿಕರು ನಗರಕ್ಕೆ ಬಂದು ಹೋಗುತ್ತಾರೆ. 100ಕ್ಕೂ ಅಧಿಕ ಖಾಸಗಿ ಹಾಗು ರಾಜ್ಯ ರಸೆತ ಸಾರಿಗೆ ಸಂಸ್ಥೆ ಬಸ್ಸುಗಳು ಬಂದು ಹೋಗುತ್ತಿದೆ. ಬಸ್ಸು ನಿಲುಗಡೆ ಮಾಡಲು ಬಸ್ಸು ನಿಲ್ದಾಣ ಇಲ್ಲ. ನಗರದ ಸುತ್ತಮುತ್ತ ವಾರ್ಡ್ಗಳಲ್ಲಿ 198 ಕುಟುಂಬಗಳು ಇಂದಿಗೂ ಕೂಡ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಕಳೆದ 12 ವರ್ಷಗಳ ಹಿಂದೆ ನಗರ ಹಾಗು ಹೊಸೂರು, ಹಾತೂರು ಅರುವತೋಕ್ಲು ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದರೂ ಇವರೆಗೆ ಕಾರ್ಯಗತಗೊಂಡಿಲ್ಲ. ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪ ಕೇವಲ ಪ್ರಸ್ತಾಪವಾಗಿಯೇ ಇದೆ ಎಂದು ಟೀಕಿಸಿದರು.
ಕಾನೂನು ಘಟಕದ ಮಾಜಿ ಅಧ್ಯಕ್ಷ ಡಿ.ಸಿ.ಧ್ರುವ ಕುಮಾರ್ ಮಾತನಾಡಿ ಕಳೆದ 20 ವರ್ಷದಿಂದ ಅಭಿವೃದ್ದಿ ಮಾಡದವರು ಇಂದು ಸಾರ್ವಜನಿಕರ ಮುಂದೆ ನಿಂತು ಮತ ಕೇಳುತ್ತಿದ್ದಾರೆ. ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳೀದರು.
ನಗರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಜಿ.ಜಿ.ಮೋಹನ್, ಮುಖಂಡರಾದ ರ‍್ವೀನ್ ಲೋಬೋ ಹಾಗೂ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷ ಹರ್ಷದ್ ಉಪಸ್ಥಿತರಿದ್ದರು.










