ಮಡಿಕೇರಿ ಮೇ 10 : ಪ್ರಜಾತಂತ್ರ ವ್ಯವಸ್ಥೆಯ ಅತ್ಯಂತ ಪವಿತ್ರ ‘ಮತದಾನ’ ಪ್ರಕ್ರಿಯೆಯ ಒಟ್ಟು ಪ್ರಮಾಣದ ಹೆಚ್ಚಳಕ್ಕೆ ಪೂರಕವಾಗಿ ಜಿಲ್ಲೆಯ ಎರಡು ಮತ ಕ್ಷೇತ್ರಗಳ ಹತ್ತು ಮತಗಟ್ಟೆಗಳು ‘ಸಖಿ ಮತಗಟ್ಟೆ’ಗಳಾಗಿ ಮತದಾರರ ಗಮನ ಸೆಳೆಯಿತು.
ಜಿಲ್ಲಾ ಕೇಂದ್ರ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮತಗಟ್ಟೆ 199 ಮತ್ತು ಮಹದೇವಪೇಟೆಯ ಸಿಎಂಸಿ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ 201 ಸರ್ವಾಲಂಕೃತಗೊoಡು ‘ಸಖಿ ಮತಗಟ್ಟೆ’ಯಾಗಿ ಗಮನ ಸೆಳೆಯಿತು. ವಿಶೇಷವಾಗಿ ಈ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿಗಳೆಲ್ಲರು ಮಹಿಳೆಯರೇ ಆಗಿದ್ದು, ಅತ್ಯಂತ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದರು.
‘ನಾನು ಹೆಮ್ಮೆಯ ಮತದಾರ. ನನ್ನ ಮತ, ನನ್ನ ಧ್ವನಿ” ಘೋಷವಾಕ್ಯದ ಆಕರ್ಷಕ ಘೋಷಣೆಯೊಂದಿಗೆ ಸಖಿ ಮತಗಟ್ಟೆಯ ಮುಖ್ಯ ದ್ವಾರ ಮತದಾರರನನ್ನು ತನ್ನೆಡೆಗೆ ಸೆಳೆಯುವುದರೊಂದಿಗೆ, ಘೋಷಣೆಯ ಮೂಲಕ ಗಮನ ಸೆಳೆಯುತಿತ್ತು. ಈ ವಿಶೇಷ ಮತಗಟ್ಟೆಯಲ್ಲಿ ಮತದಾನ ಮಾಡಿದವರು ತಮ್ಮ ಭಾವ ಚಿತ್ರ ತೆಗೆದುಕೊಳ್ಳಲು ಅನುಕೂಲವಾಗುವಂತೆ ‘ಸೆಲ್ಫಿ ಬೂತ್’ ಸಜ್ಜುಗೊಳಿಸಿದ್ದು, ಸಾಕಷ್ಟು ಮತದಾರರು ಈ ಸೆಲ್ಫಿ ಬೂತ್‌ನಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಕುತೂಹಲಕಾರಿಯಾಗಿತ್ತು.
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*