ಬೇಕಾದ ಸಾಮಾಗ್ರಿಗಳು: ಮಾವಿನ ಹಣ್ಣು ಮೂರರಿಂದ ನಾಲ್ಕು , ಹಣ್ಣು ಹಸಿಮೆಣಸಿನ ಕಾಯಿ: 4 ರಿಂದ 5, ತೆಂಗಿನ ಕಾಯಿ: ¼ ಕಪ್, ಒಣಮೆಣಸು: 2, ಸಾಸಿವೆ: ಅರ್ಧ ಚಮಚ, ಕರಿಬೇವು: 5 ರಿಂದ 6 ಎಲೆಗಳು, ಉಪ್ಪು: ರಚಿಗೆ ತಕ್ಕಷ್ಟು.
ಮಾಡುವ ವಿಧಾನ: ಮೊದಲು ಮಾವಿನ ಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿ. ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಹಸಿಮೆಣಸಿನಕಾಯಿ ಹಾಕಿ ಗ್ರೈಂಡ್ ಮಾಡಿ. ಗ್ರೈಂಡ್ ಮಾಡಿದ ಖಾರವನ್ನು ಮಾವಿನ ಹಣ್ಣಿನ ರಸಕ್ಕೆ ಹಾಕಿ. ಇದಕ್ಕೆ ರಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಬಳಿಕ ಒಂದು ಸಣ್ಣ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ, ಕರಿಬೇವು, ಒಣಮೆಣಸು ಹಾಕಿ. ಈ ಒಗ್ಗರಣೆಯನ್ನು ಗೊಜ್ಜಿಗೆ ಹಾಕಿ. ಗೊಜ್ಜು ರೆಡಿ.