ಬೇಕಾಗುವ ಸಾಮಾಗ್ರಿಗಳು :: ದೋಸೆ ಅಕ್ಕಿ- 2 ಬಟ್ಟಲು, ಬೆಲ್ಲ- 1.5 ಬಟ್ಟಲು, ಕಪ್ಪು ಎಳ್ಳು- 2 ಚಮಚ, ಏಲಕ್ಕಿ- ಚಿಟಿಕೆ, ಮೈದಾ- 3 ಟೀ ಚಮಚ, ತುಪ್ಪ- 3 ಚಮಚ, ತೆಂಗಿನತುರಿ- 2 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಅಡುಗೆ ಸೋಡಾ- ಚಿಟಿಕೆ.
ಮಾಡುವ ವಿಧಾನ :: ಮೊದಲಿಗೆ ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ನೀರು ಹಾಕಿ 5 ಗಂಟೆಗಳ ನೆನೆಯಲು ಬಿಡಿ. ನಂತರ ಮಿಕ್ಸಿ ಜಾರಿಗೆ ಅಕ್ಕಿ, ಸೋಸಿದ ಬೆಲ್ಲ, ಚಿಟಿಕೆ ಉಪ್ಪು ಹಾಗೂ ಏಲಕ್ಕಿ ಹಾಕಿ ರುಬ್ಬಿಕೊಳ್ಳಿ. ಬಳಿಕ ಈ ಹಿಟ್ಟಿಗೆ ಕಪ್ಪು ಎಳ್ಳು ಹಾಗೂ ಮೈದಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ತೆಂಗಿನತುರಿಯನ್ನು ತುಪ್ಪದಲ್ಲಿ ಹುರಿಯಿರಿ. ರುಬ್ಬಿದ ಹಿಟ್ಟಿಗೆ ತೆಂಗಿನ ತುರಿ ಹಾಕಿ ಮಿಶ್ರಣ ಮಡಿ, 7 ರಿಂದ 8 ಗಂಟೆ ಕಾಲ ಹಾಗೆ ಇಡಿ. ಹಿಟ್ಟು ದೋಸೆ ಹಿಟ್ಟಿನ ಹದಕ್ಕಿಂತ ಸ್ವಲ್ಪ ತೆಳ್ಳಗಿರಲಿ. ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಈ ವೇಳೆ ಹಿಟ್ಟಿಗೆ ಸ್ವಲ್ಪ ಅಡುಗೆ ಸೋಡಾ ಹಾಕಿ ಮಿಶ್ರಣ ಮಾಡಿ. ನಂತರ ಎಣ್ಣೆ ಬಿಸಿಯಾದಾಗ ಹಿಟ್ಟನ್ನು ಎಣ್ಣೆಗೆ ಹಾಕಿ, ಈ ವೇಳೆ ಪೂರಿಯಂತೆ ಉಬ್ಬಿ ಬರುತ್ತದೆ. ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ಇದೀಗ ರುಚಿಕರವಾದ ನೈಯ್ಯಪ್ಪ ಸವಿಯಲು ಸಿದ್ಧ.











