ಮಡಿಕೇರಿ ಮೇ 16 : ಜೆಸಿಐ ಪೊನ್ನಂಪೇಟೆ ನಿಸರ್ಗ ಸಂಸ್ಥೆ ವತಿಯಿಂದ ಮೇ 21 ರಂದು 2 ನೇ ವರ್ಷದ ಜೆಸಿ ನಿಸರ್ಗ ಶೂಟಿಂಗ್ ಸ್ಪರ್ಧೆ ನಡೆಯಲಿದೆ ಎಂದು ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಜೆಸಿ ಮುಕ್ಕಾಟಿರ ನೀತ್ ಅಯ್ಯಪ್ಪ ತಿಳಿಸಿದ್ದಾರೆ.
ಪೊನ್ನಂಪೇಟೆಯಲ್ಲಿ ಮಾತನಾಡಿದ ಅವರು ಬಾಳುಗೋಡು ಕೊಡವ ಸಮಾಜದ ಮೈದಾನದಲ್ಲಿ 0.22 ಸ್ಪರ್ಧೆ, 12 ಬೋರ್‍ನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಹಾಗೂ ಏರ್ ಗನ್ ನಲ್ಲಿ ಕೋಳಿಮೊಟ್ಟೆಗೆ ಗುರಿ ಇಡುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
0.22 ಹಾಗೂ 12 ಬೋರ್ ಸ್ಪರ್ಧೆಯ ಪ್ರಥಮ ಬಹುಮಾನ 20 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ 15 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ 10 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಸಂಸ್ಥೆಯ ಪೂರ್ವಾಧ್ಯಕ್ಷ ಅಪ್ಪಡೇರಡ ದಿನು, ಆಪಟ್ಟೀರ ಟಾಟು ಮೊಣ್ಣಪ್ಪ, ಚಟ್ಟೋಳಿರ ಶರತ್ ಸೋಮಣ್ಣ ಹಾಗೂ ಚೋನಿರ ಸೋಮಣ್ಣ ಉಪಸ್ಥಿತರಿದ್ದರು.








