ಮಡಿಕೇರಿ ಮೇ 19 : ರೋಟರಿ ಮಡಿಕೇರಿ ವತಿಯಿಂದ ಜಲಸಿರಿ ಯೋಜನೆಯಡಿ ಪಾರಾಣೆ ಪ್ರೌಢಶಾಲೆಗೆ ರೂ.50 ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಲಾಯಿತು.
ರೋಟರಿ ಮಡಿಕೇರಿ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ, ಸಹಾಯಕ ಗವರ್ನರ್ ರತನ್ ತಮ್ಮಯ್ಯ, ಪಿಡಿಜಿ ಸುರೇಶ್ ಚೆಂಗಪ್ಪ, ರೋಟರಿಯನ್ ಎಂ.ಎಂ.ಕಾರ್ಯಪ್ಪ, ಪ್ರಾಂಶುಪಾಲರಾದ ರಜನಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.