ನಾಪೋಕ್ಲು ಮೇ 20 : ಮೂರ್ನಾಡು ಪದವಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸ್ಥಾಪನೆ ಮತ್ತು ಮೊದಲ ಪೂರ್ವಭಾವಿ ಸಭೆಯನ್ನು IQAC ಅಡಿಯಲ್ಲಿ ಕಾಲೇಜಿನ ಆವರಣದಲ್ಲಿ ಪ್ರಾಂಶುಪಾಲರಾದ ಡಾ. ರೇಖಾ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಸಂಯೋಜಕ ನವೀನ್ ವಿದ್ಯಾರ್ಥಿ ಸಂಘದ ಪ್ರಾಮುಖ್ಯತೆಯ ಉದ್ದೇಶಗಳನ್ನು ಸಭೆಗೆ ತಿಳಿಸಿದರು.
ಹಳೆ ವಿದ್ಯಾರ್ಥಿ ಸಂಘದ ನೂತನ ಉಪಾಧ್ಯಕ್ಷರಾಗಿ ಉಸ್ಮಾನ್, ಕಾರ್ಯದರ್ಶಿಗಳಾಗಿ ನೌಶಾದ್, ಖಜಾಂಚಿಯಾಗಿ ಕವನ್ ಕರುಂಬಯ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು IQAC ಸಂಚಾಲಕಿ ವಿಲ್ಮಾ ರವರು ನಡೆಸಿದರೆ, ದೈಹಿಕ ಶಿಕ್ಷಕರಾದ ಬೋಪಣ್ಣನವರು ಸ್ವಾಗತಿಸಿದರು, ಉಪನ್ಯಾಸಕ ಹರೀಶ್ ವಂದಿಸಿದರು.
ವರದಿ : ದುಗ್ಗಳ ಸದಾನಂದ.









