ಸಿದ್ದಾಪುರ ಮೇ 23 : ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಕೊಡಗು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸಿದ್ದಾಪುರದಲ್ಲಿ ನಿರ್ಮಾಣಗೊಂಡಿರುವ ವರ್ಕಲ ಮುಲ್ಲಕೋಯ ತಙಳ್ ಸಮತಾ ಭವನ ಹಾಗೂ ಖಾಝಿ ಭವನವನ್ನು ಸೈಯದ್ ಉಲಾಮ ಮೊಹಮ್ಮದ್ ಜಫ್ರೀ ಉದ್ಘಾಟಿಸಿದರು.
ಎಸ್.ವೈ.ಎಸ್. ಸಂಘಟನೆಯು ದಾನಿಗಳ ಸಹಾಯದಿಂದ ಭವ್ಯ ಭವನವನ್ನು ನಿರ್ಮಾಣ ಮಾಡಿದ್ದು, ಸಂಘಟನೆಯ ಕಾರ್ಯಕ್ಕೆ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದರು.
ನಂತರ ಜಾತ್ಯತೀತ, ಸೌಹಾರ್ದ ಸಮಾಜ ನಿರ್ಮಾಣದ ಸಂದೇಶದ ಜಾಗೃತಿ ಜಾಥಕ್ಕೆ ಚಾಲನೆ ನೀಡಲಾಯಿತು. ಜಾಥವು ಕೊಡಗು ಜಿಲ್ಲೆಯಿಂದ ತಮಿಳುನಾಡು ಪ್ರವೇಶಿಸಿ ನಂತರ ಕೇರಳದ ಕೆಲವು ಜಿಲ್ಲೆಗಳಲ್ಲಿ ಸಂಚರಿಸಿ ತಿರುವನಂತಪುರಂ ನಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ಸಂಘಟನೆಯ ಸಂಚಾಲಕ ತಿಳಿಸಿದರು.
ಈ ಸಂದರ್ಭ ಪ್ರಮುಖರಾದ ಉಸ್ಮಾನ್ ಫೈಝಿ, ಉಮ್ಮರ್ ಫೈಜಝಿ, ಎಂ ಅಬ್ದುಲ್ ರೆಹಮಾನ್, ಸಿಪಿಎಂ ಬಶೀರಾ ಹಾಜೀ, ಅಬ್ದುಲ್ಲಾ ಫೈಝಿ, ಅಶ್ರಫ್ ಫೈಝೀ ಹಾಗೂ ಮತ್ತಿತರ ಗಣ್ಯರು ಹಾಜರಿದ್ದರು.









