ಮಡಿಕೇರಿ ಮೇ 23 : ಬದಲಾಗುತ್ತಿರುವ ಹವಾಮಾನ, ಜಾಗತಿಕ ತಾಪಮಾನ ಏರಿಕೆ ಪ್ರಪಂಚದಾದ್ಯಂತ ಎಲ್ಲಾ ರಾಷ್ಟ್ರಗಳು ಎದುರಿಸುತ್ತಿರುವ ಸವಾಲಾಗಿದೆ. ಈ ಜಾಗತಿಕ ಗಂಡಾಂತರ ತಡೆಗಟ್ಟಲು ಹಸಿರು ಪ್ರೀತಿಯನ್ನು ಜಾಗೃತಗೊಳಿಸಿ, ಜನರ ಬೇಡಿಕೆಗೆ ಅನುಸಾರವಾಗಿ ಸಸಿಗಳನ್ನು ಪೂರೈಸುವ ಜವಾಬ್ದಾರಿಯಿಂದ ವಿವಿಧ ಯೋಜನೆಗಳಡಿಯಲ್ಲಿ ‘ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದಿಂದ’ ಸೋಮವಾರಪೇಟೆ-ಕುಶಾಲನಗರ ರಸ್ತೆಯಲ್ಲಿ ಹುದುಗೂರು ಗ್ರಾಮದಲ್ಲಿರುವ ಸಾಮಾಜಿಕ ಅರಣ್ಯ ವಲಯದ ಸಸ್ಯಕ್ಷೇತ್ರದಲ್ಲಿ 50 ವಿವಿಧ ಸಸಿಗಳನ್ನು ಬೆಳೆಸಲಾಗಿದೆ.
ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಚೀಟಿ ಹೊಂದಿರುವ ಬಿಪಿಎಲ್ ಕಾರ್ಡುದಾರರು ಈ ಯೋಜನೆಯಲ್ಲಿ ಉಚಿತವಾಗಿ ಸಸಿಗಳನ್ನು ಪಡೆಯಬಹುದು ಹಾಗೂ ಇತರೆ ಯೋಜನೆಗಳಲ್ಲಿ ಸರ್ಕಾರ ನಿಗಧಿಪಡಿಸಿರುವ 6*9 ಅಳತೆಯ ಚೀಲದ ಸಸಿ ಒಂದಕ್ಕೆ ರೂ.6 ಹಾಗೂ 8*12 ಅಳತೆಯ ಚೀಲದ ಸಸಿ ಒಂದಕ್ಕೆ ರೂ.23 ಗಳನ್ನು ಪಾವತಿಸಿ ಪಡೆದುಕೊಳ್ಳಬಹುದು.
ಹುದುಗೂರು ಸಸ್ಯಕ್ಷೇತ್ರದಲ್ಲಿ ನೇರಳೆ, ಮಹಾಗನಿ, ನೆಲ್ಲಿ, ಸೀತಾಫಲ, ಜಂಬು ನೇರಳೆ, ಮರಸೇಬು, ಆಮೆಹಣ್ಣು, ಬಿಳಿ ಧೂಪ, ಸಂಪಿಗೆ, ಹಿಪ್ಪೆ, ರುದ್ರಾಕ್ಷಿ, ಬಿದಿರು, ಮೊಟ್ಟೆ ಹಣ್ಣು, ಕಾಚಂಪುಳಿ, ಶಿವನಿ, ಸೀಬೆ, ವಾಟೆ ಹುಳಿ, ಕಹಿಬೇವು, ಸೀಮರೂಬ, ಬಿಲ್ವಪತ್ರೆ, ಲಿಚ್ಛಿ, ನಿಂಬೆ, ಗೇರು, ಕಾಡು ಬಾದಾಮಿ, ನಕ್ಷತ್ರ ಹಣ್ಣು, ಶ್ರೀಗಂಧ, ದಾಳಿಂಬೆ, ಕೂಳಿ, ಲಾವಂಚ, ಅಗಸೆ, ರಕ್ತಚಂದನ, ಪಾರಿಜಾತ, ಹೊನ್ನೆ, ಹೊಳೆ ದಾಸವಾಳ, ಚಕ್ಕೆ, ಕಹಿ ಹುಳಿ, ಮುಳ್ಳು ಸಂಪಿಗೆ, ದೊಡ್ಡ ಪತ್ರೆ, ಬುಗುರಿ, ನೋನಿ, ತೇಗ, ಹೆಬ್ಬೇವು, ಇನ್ಸುಲಿನ್, ಹಲಸು, ಹೆಬ್ಬಲಸು, ಸಿಲ್ವರ್, ಚಕ್ರಮುನಿ, ಅಮೃತಬಳ್ಳಿ, ಬೆಣ್ಣೆ ಹಣ್ಣು, ಅಮಟೆ, ಅರಳಿ ಹಾಗೂ ಪಲಾವ್ ಎಲೆ.
ಕೊಡಗಿನಲ್ಲಿ ನಶಿಸುತ್ತಿರುವ ಕಾಡು ಜಾತಿಯ ಹಣ್ಣುಗಳ ಸಸಿಗಳು ಹಾಗೂ ಪ್ರಥಮ ಬಾರಿಗೆ ಜಾನುವಾರಿಗೆ ಉತ್ತಮ ಮೇವಿನ ಬೆಳೆಯಾದ ‘ಅಗಸೆ’ ಸಸಿಗಳನ್ನು ಮತ್ತು ಮಣ್ಣಿನ ಸವಕಳಿ ತಡೆಯಲು ನೆಡಬಹುದಾದ ಲಾವಂಚ ಸಸಿಗಳು ಹಾಗೂ ಔಷಧೀಯ ಸಸಿಗಳನ್ನು ಬೆಳೆದಿರುವುದು ವಿಶೇಷ. ಅಪರೂಪವಾದ ಪಾರಿಜಾತ ಸಸಿಗಳು ಸಹ ಲಭ್ಯವಿರುತ್ತದೆ.
ಸಸಿಗಳನ್ನು ಪಡೆಯಲು ಪಹಣಿ ಪತ್ರ(ಆರ್‍ಟಿಸಿ), ಬಿಪಿಎಲ್ ಕಾರ್ಡು(ಮನರೇಗಾ ಯೋಜನೆಗೆ ಮಾತ್ರ), ಉದ್ಯೋಗ ಚೀಟಿ(ಮನರೇಗಾ ಯೋಜನೆಗೆ ಮಾತ್ರ), ಆಧಾರ್ ಕಾರ್ಡು ಒದಗಿಸಬೇಕು. ಹೆಚ್ಚಿನ ಮಾಹಿತಿಗೆ ಫಿರೋಜ್ ಖಾನ್ ಎಸ್.ಕೆ., ಉಪ ವಲಯ ಅರಣ್ಯಾಧಿಕಾರಿಗಳು 9483646101, ಭವ್ಯ ಸಿ.ಕೆ., ಉಪ ವಲಯ ಅರಣ್ಯಾಧಿಕಾರಿಗಳು 9008994572, ಅನಿಲ್ ಕುಮಾರ್ ಕೆ.ಬಿ., ಗಸ್ತು ಅರಣ್ಯ ಪಾಲಕರು 9482108007, ಶೀಥಲ್ ಪಿ.ಎಲ್., ತಾಂತ್ರಿಕ ಸಹಾಯಕರು, ಮನರೇಗಾ (ಅರಣ್ಯ) 8861340218 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಅವರು ತಿಳಿಸಿದ್ದಾರೆ.
Breaking News
- *ಶ್ರದ್ಧಾಭಕ್ತಿಯಿಂದ ಜರುಗಿದ ಅರಪಟ್ಟು ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹಾಪೂಜೆ*
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*