ಮಡಿಕೇರಿ ಮೇ 23 : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು, ಮೇ 30 ರ ಒಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
1 ನೇ ತರಗತಿಯಿಂದ ವೃತ್ತಿಪರ ಕೋರ್ಸ್ ವರೆಗೆ ವ್ಯಾಸಾಂಗ ಮಾಡುತ್ತಿರುವ ಸದಸ್ಯರ ಮಕ್ಕಳು 2022-23 ನೇ ಸಾಲಿನಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು. ಅಂಕಪಟ್ಟಿ ಹಾಗೂ ಭಾವಚಿತ್ರ ನೀಡುವುದು ಖಡ್ಡಾಯ. ಮೇ 30 ರ ಒಳಗಾಗಿ ಅರ್ಜಿಯನ್ನು ಪ್ರೆಸ್ ಕ್ಲಬ್ ಗೆ ತಲುಪಿಸಲು ಕೋರಲಾಗಿದೆ.









