ಸುಂಟಿಕೊಪ್ಪ ಮೇ 24 : ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ 25ನೇ ವರ್ಷದ ಡಿ.ಶಿವಪ್ಪ ಸ್ಮಾರಕ ಬೆಳ್ಳಿ ಮಹೋತ್ಸವದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯದಲ್ಲಿ ವಿಜಯ ನಗರ ಎಫ್.ಸಿ. ಮೈಸೂರು ಮತ್ತು ಪೈಟರ್ ಎಫ್.ಸಿ. ಕೂತುಪರಂಬು ಕ್ವಾರ್ಟರ್ ಪೈನಲ್ ಹಂತಕ್ಕೆ ಪ್ರವೇಶ ಪಡೆದರು.
ಎಸ್.ಯು. ಎಫ್.ಸಿ. ನಂಜನಗೂಡು/ ಯಾಮಿಟಿ ಎಫ್.ಸಿ. ಗದ್ದೆ ಹಳ್ಳ ತಂಡಗಳ ನಡುವೆ ನಡೆದ ಮೊದಲ ಪಂದ್ಯದ ಮೊದಲಾರ್ಧದಲ್ಲಿ ಎರಡು ತಂಡಗಳು ಚುರುಕು ತನದ ಪ್ರದರ್ಶನ ನೀಡಿದ ಆಟಗಾರರು ಕ್ರೀಡಾಭಿಮಾನಿಗಳಿಗೆ ರಸದೌತನ ನೀಡಿದರು.
ಉತ್ತಮ ಹೊಂದಾಣಿಕೆ ಆಟವಾಡಿ ವಿಜಯ ನಗರ ತಂಡದ ಮುನ್ನಡೆ ಆಟಗಾರ ಪ್ರೀತಮ್ 29ನೇ ನಿಮಿಷದಲ್ಲಿ ಗೋಲು ಹೊಡೆಯುವ ಮೂಲಕ ಯಶಸ್ವಿಯಾದರು. ನಂತರ ನಡೆದ ದ್ವಿತೀಯಾರ್ಧ ಪಂದ್ಯದಲ್ಲಿ ಗದ್ದೆ ಹಳ್ಳದ ಯಾಮಿಟಿ ತಂಡ ರಬಸದ ಆಟಕ್ಕೆ ಒತ್ತು ನೀಡಿದರೂ ಎದುರಾಳಿ ತಂಡ ಗೋಲು ಗಳಿಸುವುದಕ್ಕೆ ಆಟದ ಕೊನೆಯವರೆಗೂ ಅವಕಾಶ ನೀಡದೆ ತಮ್ಮ ಆಟವನ್ನು ಪ್ರದರ್ಶಿಸಿ 1-0 ಗೋಲುಗಳಿಂದ ವಿಜಯ ನಗರ ತಂಡವು ಮುಂದಿನ ಹಂತಕ್ಕೆ ಪ್ರವೇಶಿಸಿತು.
ಎರಡನೇ ಪಂದ್ಯವು ಪೈಟರ್ಸ್ ಎಫ್.ಸಿ. ಕೂತುಪರಂಬು ಹಾಗೂ ಎಸ್.ಯು. ಎಫ್.ಸಿ. ನಂಜನಗೂಡು ನಡುವೆ ನಡೆದು ಎರಡು ತಂಡಗಳು ಉತ್ತಮ ಪ್ರದರ್ಶನ ನೀಡಿದರೂ 28ನೇ ನಿಮಿಷದಲ್ಲಿ ನಂಜನಗೂಡು ತಂಡದ ಆಟಗಾರನ ಕಣ್ತಪ್ಪಿನಿಂದ ಕೂತುಪರಂಬು ತಂಡಕ್ಕೆ ಟೈ ಬ್ರೇಕರ್ ಅವಕಾಶ ಲಭಿಸಿತು. ಇದನ್ನು ಬಳಸಿಕೊಂಡ ತಂಡದ ಆಟಗಾರ ಅಸ್ಕರ್ ಗೋಲು ಹೊಡೆಯುವಲ್ಲಿ ಯಶಸ್ವಿಯಾದರು. ದ್ವಿತಿಯಾರ್ಧದಲ್ಲಿ ನಂಜನಗೂಡು ತಂಡ ಎಷ್ಟೇ ಪ್ರಯತ್ನ ಪಟ್ಟರೂ ಎದುರಾಳಿ ತಂಡ ಚೆಂಡಿನ ಮೇಲೆ ಹಿಡಿತ ಹಾಗೂ ಆಕರ್ಶಕ ಪಾಸ್ ಗಳ ಮೂಲಕ ಆಟವಾಡಿ 19ನೇ ನಿಮಿಷದಲ್ಲಿ ರಾಪೀಲ್ ಗೊಲು ಹೊಡೆದ ಪರಿಣಾಮ 2 ಗೋಲುಗಳ ಮುನ್ನಡೆ ಸಾಧಿಸಿತು.
ಮುಂದುವರಿದ ಆಟದಲ್ಲಿ ನಂಜನಗೂಡು ತಂಡದ ಗೋಲು ಕೀಪರ್ ಹಲವು ಗೋಲುಗಳನ್ನು ತಡೆದರೂ ಕೂತುಪರಂಬು ತಂಡದ ಮತ್ತೊಬ್ಬ ಆಟಗಾರ ರಾಸೀದ್ ಕೊನೆ ಗಳಿಗೆಯಲ್ಲಿ ಸಿಕ್ಕಿದ ಕಾರ್ನರ್ ಕಿಕ್ಕ್ ಬಳಸಿ ಗೋಲು ಬಾರಿಸಿದ ಪರಿಣಾಮ 3-0 ಗೋಲುಗಳಿಂದ ಪೈಟರ್ಸ್ ಎಫ್.ಸಿ ಕೂತುಪರಂಬು ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ಇಂದಿನ ಪಂದ್ಯ : ಹೋರಿಜಾನ್ ಎಫ್.ಸಿ ಬೆಂಗಳೂರು, ಮತ್ತು ಪೈಟರ್ಸ್ ಎಫ್.ಸಿ. ಕೂತುಪರಂಬು ಮೊಗ್ರಾಲ್ ಎಫ್.ಸಿ ಕುಂಬ್ಲೆ ಹಾಗೂ ವಿಜಯ ನಗರ ಎಫ್.ಸಿ. ಮೈಸೂರು.