ಮಡಿಕೇರಿ ಮೇ 24 : ಕೊಡಗು ಗೌಡ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯವಳಿಯ ದಿನದ ರೋಚಕ ಪಂದ್ಯದಲ್ಲಿ ಕಾಫಿ ಕ್ರಿಕೆಟರ್ಸ್ ಮತ್ತು ಜಿ.ಕಿಂಗ್ಸ್ ಸಿದ್ದಲಿಂಗಪುರ(ಜಿಕೆಎಸ್) ತಂಡಗಳು ಗೆಲುವು ಸಾಧಿಸಿ ಪೂರ್ಣ ಅಂಕಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡವು.
ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಆಯೋಜಿತ ಪಂದ್ಯಾವಳಿಯ ದಿನದ ಮೊದಲ ಪಂದ್ಯದಲ್ಲಿ ಕಾಫಿ ಕ್ರಿಕೆಟರ್ಸ್ ತಂಡವು 7 ವಿಕೆಟ್‍ಗಳ ಗೆಲುವನ್ನು ಎದುರಾಳಿ ಕುಕ್ಕನೂರು ಬುಲ್ಸ್ ತಂಡದ ವಿರುದ್ಧ ಸಾಧಿಸಿತು.
ಮೊದಲಿಗೆ ಬ್ಯಾಟ್ ಮಾಡಿದ ಕುಕ್ಕನೂರು ತಂಡ ನಿಗದಿತ ಹತ್ತು ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿತು. ಐಕಾನ್ ಆಟಗಾರ ಬೈಲೆ ಡ್ಯೂಕ್ ಕಾವೇರಿ ಮೂರು ಬೌಂಡರಿ ಮತ್ತು ಒಂದು ಸಿಕ್ಸ್‍ನಿಂದ 23(17 ಬಾಲ್)ರನ್ ಗಳಿಸಿ ತಂಡದ ಗೌರವದ ಮೊತ್ತಕ್ಕೆ ಕಾರಣರಾದರು. ಕಾಫಿ ಕ್ರಿಕೆಟರ್ಸ್‍ನ ವಿವಾನ್ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ನಂತರ ಬ್ಯಾಟ್ ಮಾಡಿದ ಕಾಫಿ ಕ್ರಿಕೆಟರ್ಸ್ 8.4 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 81 ರನ್‍ಗಳಲ್ಲಿ ಗುರಿತಲುಪಿ ಜಯಗಳಿಸಿತು. ವಿವಾನ್ ಮತ್ತು ಕೇಚಪ್ಪನ ಕುಜಲ್ ಕಾರ್ಯಪ್ಪ ತಲಾ 19 ರನ್ ಗಳಿಸಿ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು.
ದ್ವಿತೀಯ ಪಂದ್ಯದಲ್ಲಿ ಜಿ.ಕಿಂಗ್ಸ್ ಸಿದ್ದಲಿಂಗಪುರ (ಜಿಕೆಎಸ್)ತಂಡ ಎದುರಾಳಿ ಕುಕ್ಕನೂರು ಬುಲ್ಸ್ ತಂಡವನ್ನು ಡಕ್ ವರ್ತ್‍ಲೂಯಿಸ್ ನಿಯಮದ ಪ್ರಕಾರ ಪರಾಭವಗೊಳಿಸಿತು.
ಮೊದಲು ಬ್ಯಾಟ್‍ಮಾಡಿದ ಜಿಕೆಎಸ್ ನಿಗದಿತ 10 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತು.
ಆರಂಭಿಕ ಆಟಗಾರ ಕೀಜನ ಯತೀಶ್ ಮೊತ್ತಮೊದಲ ಅರ್ಧಶತಕ(52) ಗಳಿಸಿದರು. ಕುಕ್ಕನೂರು ತಂಡದ ಪರವಾಗಿ ಮೂಡಗದ್ದೆ ವಿನೋದ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಪಟ್ಟಡ ದೀಪಕ್ 2 ವಿಕೆಟ್ ಪಡೆದರು.
ನಂತರ ಬ್ಯಾಟ್ ಮಾಡಿದ ಕುಕ್ಕನೂರು ತಂಡ 6.2 ಓವರ್‍ಗಳಿಗೆ 5 ವಿಕೆಟ್ ಕಳೆದುಕೊಂಡು 36 ರನ್ ಗಳಿಸಿತು.
ಈ ಸಂದರ್ಭ ಮಳೆ ಅಡ್ಡಿಪಡಿಸಿದ ಕಾರಣ ಡಕ್‍ವರ್ತ್ ಲೂಯಿಸ್ ನಿಯಮದ ಪ್ರಕಾರ ಜಿ.ಕಿಂಗ್ಸ್ ತಂಡ ವಿಜಯಿಯೆಂದು ನಿರ್ಧರಿಸಲಾಯಿತು.














