ಮಡಿಕೇರಿ ಮೇ 24 : ಭಾರತದ ಧೀಮಂತ ಸೇನಾಧಿಕಾರಿಯಾಗಿದ್ದ ಜನರಲ್ ತಿಮ್ಮಯ್ಯ ಅವರ ಸೇನಾಜೀವನ ಪ್ರತೀಯೋವ೯ ಯುವಕ, ಯುವತಿಯರಿಗೂ ಆದಶ೯ಪ್ರಾಯ. ನಮಗೆ ಎಲ್ಲವನ್ನೂ ನೀಡಿದ ಭಾರತಕ್ಕೆ ನಾವು ಮಹತ್ವದ್ದೇನನ್ನಾದರೂ ನೀಡಬೇಕೆಂಬ ನಿಲುವನ್ನು ತಿಮ್ಮಯ್ಯ ಅವರ ಜೀವನದ ಮಾಹಿತಿ ಪಡೆದ ಎಲ್ಲರೂ ಹೊಂದಬೇಕೆಂದು ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಪೊಲೀಸ್ ಅಧಿಕಾರಿ ಕೆ.ಅಣ್ಣಮಲೈ ಹೇಳಿದ್ದಾರೆ.
ಪತ್ನಿ ಅಖಿಲಾ ಸ್ವಾಮಿನಾಥನ್, ಪುತ್ರ ಅಜು೯ನ್, ಪುತ್ರಿ ಆರಾಧನ ಅವರೊಂದಿಗೆ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಅಣ್ಣಮಲೈ, ಕೂಲಂಕುಶವಾಗಿ ತಿ್ಮ್ಮಯ್ಯ ಅವರ ಜೀವನದ ಬಗ್ಗೆ ಮಾಹಿತಿಯನ್ನು ಫೀಲ್ಡ್ ಮಾಷ೯ಲ್ ಕೆಎಂ.ಕಾಯ೯ಪ್ಪ, ಜನರಲ್ ತಿಮ್ಮಯ್ಯ ಫೋರಂ ಸಂಚಾಲಕ ನಿವೃತ್ತ ಮೇಜರ್ ಬಿದ್ದಂಡ ನಂದ ಅವರಿಂದ ಪಡೆದುಕೊಂಡರು.
ಈ ಸಂದಭ೯ ಪ್ರತಿಕ್ರಿಯಿಸಿದ ಅಣ್ಣಮಲೈ, ಭಾರತದ ಅಪ್ರತಿಮ ಸೇನಾನಿ ಜನರಲ್ ತಿಮ್ಮಯ್ಯ ಕೊಡಗಿನವರು ಎಂಬುದೇ ಕೊಡಗಿಗೆ ಪ್ರತಿಷ್ಟೆಯ ವಿಚಾರವಾಗಿದೆ. ಇಂಥ ಧೀರಸೇನಾನಿಯನ್ನು ಹೊಂದಿದ್ದ ಕೊಡಗಿನ ಪವಿತ್ರ ಭೂಮಿ ಧನ್ಯವಾಗಿದೆ. ತಿಮ್ಮಯ್ಯ ಸ್ಮರಣಾಥ೯ ಸ್ಮಾರಕ ಭವನ ಹೊಂದುವ ಮೂಲಕ ಅವರ ಜೀವನ ಮತ್ತು ಸೇನಾ ಸಾಧನೆಯನ್ನು ವಿಶ್ವಕ್ಕೇ ತಿಳಿಸುವ ಕೆಲಸವಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಶ್ಲಾಘಿಸಿದರು. ಇಂಥ ವೀರನ ಸ್ಮಾರಕ ಭವನಕ್ಕೆ ಭೇಟಿ ನೀಡಿರುವುದು ತನ್ನಲ್ಲಿ ಧನ್ಯತೆ ಮೂಡಿಸಿದೆ ಎಂದೂ ಅಣ್ಣಮಲೈ ಅಭಿಪ್ರಾಯ ಪಟ್ಟರು.
ಜನರಲ್ ತಿಮ್ಮಯ್ಯ ಅವರ ಸಾಹಸಗಾಥೆ ಕೇಳಿ ಭಾವಪರವಶರಾದ ಅಣ್ಣಾಮಲೈ ಅವರು, ತಿಮ್ಮಯ್ಯ ಭಾವಚಿತ್ರಕ್ಕೆ ನಮಸ್ಕರಿಸುತ್ತಿದ್ದದ್ದು ಗಮನಾಹ೯ವಾಗಿತ್ತು. ಈ ಸಂದಭ೯ ತಿಮ್ಮಯ್ಯ ಸ್ಮಾರಕ ಭವನದ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಹಾಜರಿದ್ದರು. ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅಣ್ಣಮಲೈ ಇದು ರಾಜಕೀಯ ಮಾತಿಗೆ ಸಮಯ ಸಂದಭ೯ವಲ್ಲ. ತಾನು ಎರಡು ದಿನಗಳ ಕಾಲ ಕುಟುಂಬದೊಂದಿಗೆ ಕೊಡಗಿನಲ್ಲಿ ಪ್ರವಾಸ ಮಾಡುತ್ತಿರುವುದಾಗಿ ಹೇಳಿದರು.