ಸುಂಟಿಕೊಪ್ಪ ಮೇ 24 : ಡಿ.ಶಿವಪ್ಪ ಸ್ಮಾರಕ 25ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‍ಬಾಲ್ ಪಂದ್ಯದಲ್ಲಿ ಹರಿಜನ್ ಎಫ್.ಸಿ ಬೆಂಗಳೂರು, ಮೊಗ್ರಲ್ ಎಫ್.ಸಿ ಕುಂಬ್ಳೆ, ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಬ್ಲೂ ಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿಯಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಡಿ.ಶಿವಪ್ಪ ಸ್ಮಾರಕ 25ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‍ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಪುಟ್ಬಾಲ್ ಪಂದ್ಯಾವಳಿಯಲ್ಲಿ ಹರಿಜನ್ ಎಫ್.ಸಿ ಬೆಂಗಳೂರು ಹಾಗೂ ಕೂತುಪರಂಬು ಎಫ್.ಸಿ.ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡವು ಎದುರಾಳಿ ತಂಡದ ವಿರುದ್ಧ ಆಕ್ರಮಣ ಆಟಕ್ಕೆ ಇಳಿದ ಬೆಂಗಳೂರು ತಂಡದ ಸುಮನ್ ಮೊದಲಾರ್ಧದ 28ನೇ ನಿಮೀಷದಲ್ಲಿ ಒಂದು ಗೋಲುಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ದ್ವಿತೀಯಾರ್ಧದಲ್ಲಿ ಹರಿಜನ್ ತಂಡದ ಆಟಗಾರ ಬಿರುಸಿನ ಆಟಕ್ಕೆ ಇಳಿಯುವುದರೊಂದಿಗೆ 12ನೇ ನಿಮಿಷದಲ್ಲಿ ಸುಮನ್‍ಗೆ ಸಿಕ್ಕಿದ ಉತ್ತಮ ಅವಕಾಶವನ್ನು ಮತ್ತೊಂದು ಗೋಲುಗಳಿಸುವ ಮೂಲಕ ಎದುರಾಳಿ ತಂಡಕ್ಕೆ ಒತ್ತಡಕ್ಕೆ ಸಿಲಿಕಿಸಿದರು.
21 ಮತ್ತು 23ನೇ ನಿಮೀಷದಲ್ಲಿ ರೂಪೇಶ್ ಒಂದರ ಹಿಂದೆ ಗೋಲುಗಳಿಸುವ ಮೂಲಕ ಎದುರಾಳಿ ಕೂತುಪರಂಬು ಎಪ್.ಸಿ. ತಂಡದ ವಿರುದ್ಧ 4 ಗೋಲುಗಳ ಅಂತರವನ್ನು ಕಾಯ್ದುಕೊಂಡರು. ಎದುರಾಳಿ ಕೂತುಪರಂಬು ತಂಡದ ಆಟಗಾರ 27 ನೇ ನಿಮೀಷದಲ್ಲಿ ಹಾಜು 1 ಹರಿಜನ್ ತಂಡಕ್ಕೆ ಬಾರಿಸುವ ಮೂಲಕ ತಂಡದ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು.
ಕೊನೆಯಲ್ಲಿ ಬೆಂಗಳೂರು ಹರಿಜನ್ ಎಫ್.ಸಿ. ತಂಡವು 4-1 ಗೋಲುಗಳಿಂದ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ದ್ವಿತೀಯ ಪಂದ್ಯಾವಳಿಯಲ್ಲಿ ಮೊಗ್ರಲ್ ಎಫ್.ಸಿ ಕುಂಬ್ಳೆ ಹಾಗೂ ಮೈಸೂರು ವಿಜಯನಗರ ಎಫ್.ಸಿ. ತಂಡಗಳ ನಡುವೆ ನಡೆದು 2 ತಂಡದವರು ಆಟಗಾರರು ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದು, ಎರಡೂ ತಂಡದವರಿಗೆ ಉತ್ತಮ ಅವಕಾಶಗಳು ದೊರೆತರೂ ಗೋಲುಗಳಿಸುವಲ್ಲಿ ವಿಫಲರಾದರೂ ಮತ್ತು ವಿಜಯನಗರ ತಂಡದವರು ಕ್ರೀಡೆಯಲ್ಲಿ ಅಶಿಸ್ತು ತೋರಿದಕ್ಕಾಗಿ ಹಳದಿ ಬಿಲೆಯನ್ನು ನೀಡಲಾಯಿತು. ದ್ವಿತೀಯಾರ್ಧದಲ್ಲಿ 2 ತಂಡಗಳಿಗೆ ಗೋಲು ಗಳಿಸುವ ಉತ್ತಮ ಅವಕಾಶಗಳು ದೊರೆತರೂ ಆಟಗಾರರ ಸಣ್ಣ ತಪ್ಪಿಗಳಿಂದ ಕೈ ಚೆಲ್ಲಿದರು.
ಕುಂಬ್ಳೆ ತಂಡದವರಿಗೆ 17ನೇ ನಿಮಿಷದಲ್ಲಿ ದೊರೆತ ಕಾರ್ನರ್ ಕಿಕ್‍ನಲ್ಲಿ ಖಾಲಿದ್ ಸಿಕ್ಕಿದ ಉತ್ತಮ ಹೆಡ್ ಮೂಲಕ ಗೋಲುಗಳಿಸುವುದರೊಂದಿಗೆ ತಂಡಕ್ಕೆ ಉತ್ತಮ ಮುನ್ನಡೆ ಒದಗಿಸಿದರು ನಂತರ ಮೈಸೂರು ವಿಜಯನಗರ ಎಫ್.ಸಿ. ತಂಡದವರು ಬಿರುಸಿನ ಆಟಕ್ಕೆ ಇಳಿದರು. ಕುಂಬ್ಳೆ ತಂಡದ ಆಟಗಾರರು ಹಾಗೂ ಕ್ಷೇತ್ರ ರಕ್ಷಕ ಅವರ ಪ್ರಯತ್ನವನ್ನು ಗೋಲುಗಳಿಸಿದರು. ಮೊಗ್ರಲ್ ಕುಂಬ್ಳೆಯ ತಂಡದವರಿಗೂ ಹಳದಿ ಕ್ರೀಡೆಯಲ್ಲಿ ಆಶಿಸ್ತು ತೋರಿದಕ್ಕಾಗಿ ಹಳದಿ ಬಿಲೆಯನ್ನು ತೋರಿಸುವ ಮೂಲಕ ಎಚ್ಚರಿಕೆಯನ್ನು ನೀಡಲಾಯಿತು. ಮೊಗ್ರಲ್ ಎಫ್.ಸಿ ಕುಂಬ್ಳೆ ತಂಡವು 1-0 ಗೋಲುಗಳಿಂದ ಜಯಗಳಿಸಿತು.
Breaking News
- *ಬಾಳುಗೋಡುವಿನಲ್ಲಿ ಸಂಭ್ರಮದ ಕೊಡವ ನಮ್ಮೆ : ಕೊಡವ ಸಂಸ್ಕೃತಿ, ಪರಂಪರೆಗಳ ಉಳಿವಿಗೆ ಶ್ರಮಿಸಿ : ಶಾಸಕ ಎ.ಎಸ್.ಪೊನ್ನಣ್ಣ*
- *ವಿರಾಜಪೇಟೆಯಲ್ಲಿ ಶಾಸಕರಿಂದ ಕೃಷಿ ಯಂತ್ರೋಪಕರಣ ವಿತರಣೆ*
- *ಮಡಿಕೇರಿ : ನ್ಯುಮೋನಿಯಾ ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಅಭಿಯಾನ*
- *ಕೊಡಗು : ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮ ಪ್ರಗತಿ ಸಾಧಿಸಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ*
- *ಕೊಡಗು : ಶಿಶು ಮರಣ ತಡೆಯಲು ಹೆಚ್ಚಿನ ಜಾಗೃತಿ ಮೂಡಿಸಿ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚನೆ*
- *ಮಡಿಕೇರಿಯ ಹೃದಯ ಭಾಗದಲ್ಲಿ ವಾಣಿಜ್ಯ ಸಂಕೀರ್ಣ ಮಾರಾಟಕ್ಕಿದೆ*
- *ನ.30 ರಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕೊಡಗು ಜಿಲ್ಲಾ ಪ್ರವಾಸ*
- *ಜಾರ್ಖಂಡ್ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕಾರ*
- *ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು*
- *TO LET / ಬಾಡಿಗೆಗೆ*