ಮಡಿಕೇರಿ ಮೇ 25 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಕೊಡವ ಜನಾಂಗದ ಏಕೈಕ ಪ್ರತಿನಿಧಿಯಾಗಿರುವ ಎ.ಎಸ್ ಪೊನ್ನಣ್ಣರಿಗೆ ಸಚಿವ ಸ್ಥಾನ ನೀಡಬೇಕು, ತಪ್ಪಿದ್ದಲ್ಲಿ ಜಿಲ್ಲೆಯಲ್ಲಿ ಪಕ್ಷಭೇದ ಮರೆತು ಬೃಹತ್ ಹೋರಾಟ ನಡೆಸುವುದಾಗಿ ಅಖಿಲ ಕೊಡವ ಸಮಾಜಗಳ ಮುಖಂಡರು ಎಚ್ಚರಿಕೆ ನೀಡಿದರು.
ಶಾಸಕ ಎ.ಎಸ್ ಪೊನ್ನಣ್ಣರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ವಿರಾಜಪೇಟೆಯ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ನಡೆದ ಜಿಲ್ಲೆಯ ವಿವಿಧ ಕೊಡವ ಸಮಾಜ ಹಾಗೂ ಕೊಡವ ಸಂಘಟನೆಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಪೊನ್ನಣ್ಣನವರಿಗೆ ಸಚಿವ ಸ್ಥಾನ ನೀಡದಿದ್ದರೆ ಒಗ್ಗಟ್ಟಿನ ಹೋರಾಟ ನಡೆಸಲು ಸಭೆ ತಿರ್ಮಾನಿಸಿ ಸದ್ಯದಲ್ಲಿಯೇ ಮುಖ್ಯಮಂತ್ರಿ ಹಾಗೂ ವರಿಷ್ಟರ ಬಳಿ ನಿಯೋಗ ತೆರಳಲು ಸಭೆ ತಿರ್ಮಾನಿಸಿತು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಸುದೀರ್ಘ ಅವಧಿಯ ಮೇಲೆ ಕೊಡವ ಜನಾಂಗಕ್ಕೆ ಒಬ್ಬರು ಉತ್ತಮ ಜನಪ್ರತಿನಿಧಿ ದೊರಕ್ಕಿದ್ದಾರೆ. ಜನಾಂಗದ ಹಿತದೃಷ್ಟಿಯಿಂದ ಹಾಗೂ ಜಿಲ್ಲೆಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಎ.ಎಸ್ ಪೊನ್ನಣ್ಣರಿಗೆ ಸಚಿವ ಸ್ಥಾನ ನೀಡಬೇಕಿದೆ ಇದರಲ್ಲಿ ಯಾವುದೇ ರಾಜಕೀಯ ಲೇಪ ಹಾಕದೆ ಪಕ್ಷಾತೀತವಾಗಿ ಎಲ್ಲಾರು ಒಂದಾಗಬೇಕಿದೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ವಿರಾಜಪೇಟೆ ಕ್ಷೇತ್ರದಲ್ಲಿ ಕೊಡವರಾದ ಪೊನ್ನಣ್ಣ ಇಂದು ಶಾಸಕರಾಗಿದ್ದಾರೆ. ಪಕ್ಷ ಯಾವುದೇ ಇದ್ದರು ಅವರು ಪಕ್ಷಾತೀತರು. ಎಲ್ಲಾ ಪಕ್ಷದ ಸಹಾಯದಿಂದ ಗೆಲುವು ಸಾಧಿಸಿದ್ದಾರೆ ಹೊರತು ಒಂದೇ ಪಕ್ಷದ ಮತದಿಂದ ಆಯ್ಕೆಯಾಗಿಲ್ಲ. ಆದರಿಂದ ಕೊಡಗಿನ ಜಲ್ವಂತವಾದ ಗಂಭೀರ ಸಮಸ್ಯೆಗಳನ್ನು ನೀಗಿಸಿ ಮುನ್ನಡೆಯಲು ಪೊನ್ನಣ್ಣರಿಗೆ ಸಚಿವ ಸ್ಥಾನ ದೊರೆಯಬೇಕಿದೆ ಎಂದರು.
ಅಂದು ಮೂರಿದ್ದ ವಿಧಾನಸಭಾ ಕ್ಷೇತ್ರ ಇಂದು ಎರಡಾಯಿತು, ಮುಂದೆ ಜನಸಂಖ್ಯೆ ಆಧಾರದ ಮೇಲೆ ಒಂದಾದರೂ ಆಶ್ಚರ್ಯ ಪಡಬೇಕಾಗಿಲ್ಲ, ಜಮ್ಮ ಸಮಸ್ಯೆ ಬಗ್ಗೆ ಮಸೂದೆಗೆ ರಾಷ್ಟ್ರಪತಿ ಸಹಿ ಆಗಿದ್ದರು ಎಂಟು ವರ್ಷ ಕಳೆದದೂ ಜಾರಿಯಾಗದೆ ಸಮಸ್ಯೆ ಹಾಗೇ ಉಳಿದುಕೊಂಡಿದೆ. ಕೋವಿ ಸಮಸ್ಯೆ ಸೇರಿದಂತೆ ಪೊನ್ನಂಪೇಟೆಯ ಕ್ರೀಡಾ ಶಾಲೆಯಲ್ಲಿ ಕೊಡಗಿನ ಮಕ್ಕಳು ಅವಕಾಶ ವಂಚಿತರಾಗುತ್ತಿದ್ದಾರೆ ಇದು ಸೇರಿದಂತೆ ಇನ್ನು ಹಲವು ಗಂಭೀರ ಸಮಸ್ಯೆ ಇದೆ ಆದ್ದರಿಂದ ನಮಗೆ ಸಮರ್ಥವಾದ ಸಚಿವರ ಅಗತ್ಯ ಇದೆ ಎಂದರು.
ಕೊಡವ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಪೂವಯ್ಯ ಮಾತನಾಡಿ, ಈ ಬಾರಿ ಆಯ್ಕೆಯಾದ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಲೇಬೇಕು. ನಮ್ಮ ಕೊಡಗಿನ ಗಂಭೀರ ಸಮಸ್ಯೆಗಳು ಪರಿಹಾರ ಕಾಣಬೇಕಾದರೆ ಈಗಿನ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು. ಜಿಲ್ಲೆಗೆ ಹಾಗೆ ಬಂದು ಈಗೆ ಹೋಗುವ ಉಸ್ತುವಾರಿಗಳು ಬೇಡ. ನಮ್ಮದೆ ಸಚಿವರು, ನಮ್ಮದೇ ಉಸ್ತುವಾರಿ ಇದ್ದರೆ ಆಡಳಿತ ಸುಗಮವಾಗಿ ಉತ್ತಮವಾಗಿ ಜಿಲ್ಲೆಯಲ್ಲಿ ಸಾಗುತ್ತದೆ. ಆದರಿಂದ ರಾಜ್ಯದ ಮುಖ್ಯಮಂತ್ರಿಯವರನ್ನು ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ನಿಯೋಗದೊಂದಿಗೆ ತೆರಳಿ ಭೇಟಿಯಾಗಿ ಬೇಡಿಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ, ಚುನಾವಣೆ ಸಮಯದಲ್ಲಿ ಜನಾಂಗದ ಹಿತದೃಷ್ಟಿಯಿಂದ ನಾವು ಯಾವುದೇ ರಾಜಕೀಯ ಮಾಡಿಲ್ಲ, ಅಲ್ಲದೇ ಯಾವುದೇ ಪಕ್ಷಕ್ಕೂ ಪರ ವಿರೋಧ ವ್ಯಕ್ತಪಡಿಸಿಲ್ಲ. ಚುನಾವಣೆಯೇ ಬೇರೆ ಸಚಿವ ಸ್ಥಾನ ನೀಡುವುದೇ ಬೇರೆ ಚುನಾವಣೆಗೆ ಸಚಿವ ಸ್ಥಾನವನ್ನು ಬೆರೆಸುವುದು ಬೇಡ, ನಾವು ಪಕ್ಷಾತೀತವಾಗಿ ಸಚಿವ ಸ್ಥಾನಕ್ಕೆ ಹೋರಾಟ ಮಾಡಬೇಕಿದೆ ಈ ಮೂಲಕ ಏಕೈಕ ಕೊಡವ ಶಾಸಕನಿಗೆ ಸರ್ಕಾರ ಉನ್ನತ ಸ್ಥಾನಮಾನ ನೀಡಬೇಕಿದೆ ಎಂದರು.
ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ ಮತ್ತು ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಜಬ್ಬೂಮಿ ಸಂಘಟನೆಯ ಸಂಚಾಲಕ ಚೊಟ್ಟೆಕ್’ಮಾಡ ರಾಜೀವ್ ಬೋಪಯ್ಯ, ವಿರಾಜಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಸೇರಿದಂತೆ ಹಲವರು ಮಾತನಾಡಿದರು.
ಈ ಸಂದರ್ಭದಲ್ಲಿ ಪೊಮ್ಮಕ್ಕಡ ಪರಿಷತ್’ನ ಮೂವೇರ ರೇಖಾ ಪ್ರಕಾಶ್, ಅಪ್ಪುಮಣಿಯಂಡ ತುಳಸಿ, ಮಾಳೇಟೀರ ರತ್ನ ಸುಬ್ಬಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕೊಟೇರ ಕಿಶನ್ ಉತ್ತಪ್ಪ, ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ವಿರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ಕುಂಬೇರ ಮನು ಕುಮಾರ್, ನಿರ್ದೆಶಕ ಚೇಮಿರ ಅರ್ಜುನ್, ಬೇರಳಿ ನಾಡ್ ತಕ್ಕ ಮಳವಂಡ ಭುವೇಶ್ ದೇವಯ್ಯ, ಕನೆಕ್ಟೀಂಗ್ ಕೊಡವ ಸಂಘಟನೆಯ ಅಪ್ಪಂಡೇರಂಡ ಯಶ್ವಂತ್ ಕಾಳಪ್ಪ, ಕೊಡವ ತಕ್ಕ್ ಎಳ್ತ್’ಕಾರಡ ಕೂಟದ ಅಮ್ಮಣಿಚಂಡ ಪ್ರವೀಣ್ ಚೆಂಗಪ್ಪ, ತಿಂಗಕೋರ್ ಮೊಟ್ಟ್ ಮಲ್ಲಪನೆರ ವಿನು ಚೆಂಗಪ್ಪ, ತಿತೀರ ಕುಟ್ಟಪ್ಪ, ಜಬ್ಬೂಮಿ ಸಂಘಟನೆಯ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಪೊಂಬೊಳ್ಚ ಕೂಟದ ಕೊಟೇರ ಉದಯ್, ಅಮ್ಮತಿ ಕೊಡವ ಸಮಾಜದ ನೆಲ್ಲಚಂಡ ಭೀಮಯ್ಯ, ಚೆಯ್ಯಂಡಾಣೆ ಕೊಡವ ಸಮಾಜದ ಮುಂಡ್ಯೋಳಂಡ ಬಿದ್ದಪ್ಪ, ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ, ಕೊಡವಾಮೆ ಕೊಂಡಾಟ ಸಂಘಟನೆಯ ಕಾರ್ಯದರ್ಶಿ ಕುಂಞೀರ ಗಿರೀಶ್, ಮಲ್ಲಂಡ ದರ್ಶನ್, ಪೂಮಾಲೆ ಮುಂದ್ ಕೊಡವ ಸಂಘದ ಅಜ್ಜಿನಿಕಂಡ ಸುಧೀರ್, ವಿಜಯನಗರ ಕೊಡವ ಸಂಘದ ಮೆಕೇರೀರ ರವಿ ಪೂವಯ್ಯ, ಯುಕೋ ಸಂಚಾಲಕ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ, ಕೊಡವ ರೈಡರ್ಸ್ ಕ್ಲಬ್ ಸಂಚಾಲಕ ಅಜ್ಜಿಕುಟ್ಟಿರ ಸುಬ್ಬಯ್ಯ ಸೇರಿದಂತೆ ವಿವಿಧ ಕೊಡವ ಸಮಾಜದ ಪ್ರತಿನಿಧಿಗಳು ಸಂಘ ಸಂಸ್ಥೆಯ ಪ್ರಮುಖರು ಹಾಗೂ ಕೊಡವ ಸಮಾಜ ಒಕ್ಕೂಟದ ಪ್ರತಿನಿಧಿ ಸೇರಿದಂತೆ ವಿವಿಧ ಕೊಡವ ಸಮಾಜಗಳ ಪ್ರತಿನಿಧಿಗಳು ಹಾಗೂ ವಿವಿಧ ಕೊಡವ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.